ಅಂಬೇಡ್ಕರ್ ಹಾಗೂ ಸಂವಿಧಾನದ ವಿರೋಧಿಗಳು ಸಂಘಪರಿವಾರದವರು ಸಂವಿಧಾನದ ದ್ರೋಹಿಗಳು, ಮೋಹನ್ ಭಾಗವತ್ ಯಾರು? ಯಾವ ಸಂವಿಧಾನದ ಹುದ್ದೆ ನಿಭಾಯಿದ್ದಾರೆ. ಆರ್ ಎಸ್ ಎಸ್ ಎಲ್ಲಿಯೂ ನೊಂದಣಿ ಆಗಿಲ್ಲ, ಕೋಟ್ಯಾಂತರ ರೂಪಾಯಿ ಖರ್ಚು ಮಾಡ್ತಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಬೇರೆ ಬೇರೆ ಕಡೆ ಖರ್ಚು ಮಾಡುತ್ತಿದ್ದಾರೆ. ನಮ್ಮ ತೆರಿಗೆ ಹಣದಲ್ಲಿ ಭಾಗವತ್ಗೆ z+ ಸೆಕ್ಯೂರಿಟಿ ಕೊಟ್ಟಿದ್ದಾರೆ. ಮೊದಲು ಅದನ್ನು ವಾಪಸ್ ಪಡೆಯಬೇಕು. ಯಾವತ್ತು ತ್ರಿವರ್ಣ ಧ್ವಜವನ್ನು ಒಪ್ಪಿಲ್ಲ, ನಾವು ಧ್ವಜವನ್ನು ಒಪ್ಪಲ್ಲ ಅಂತ ಹೇಳಿದ್ದಾರೆ, ಇದು ಆರ್ ಎಸ್ ಎಸ್ ನಲ್ಲೇ ಇದೆ, ಸಂವಿಧಾನದಲ್ಲಿ ಪಾಶ್ಚಿಮಾತ್ಯ ದೇಶದಿಂದ ಎರವಲು ಪಡೆಯಲಾದ ವಿಚಾರಗಳಿವೆ ಅದಕ್ಕೆ ಒಪ್ಪಲ್ಲ ಎಂದು ಗೊಲ್ವಾಲ್ಕರ್ ಹೇಳಿದ್ದಾರೆ.
ಇವರು ಸಂವಿಧಾನದ ಒಪ್ಪಿದ್ದಾರೆ ಅಂದ್ರೆ ಹಾಸ್ಯಾಸ್ಪದ ಆಗುತ್ತದೆ. ಸಂವಿಧಾನ ಇರುವವರೆಗೆ ಈ ದೇಶ ಒಂದಾಗಿರುತ್ತೆ, ಸಂವಿಧಾನ ಇಲ್ಲ ಅಂದಾಗ ಮತ್ತೆ ಒಡೆಯುತ್ತದೆ. ಅದು ಓಡೆದ್ರೆ ಆರ್ ಎಸ್ ಎಸ್ ಕಾರಣವಾಗುತ್ತೆ. ಇವರೆಲ್ಲ ಭಾರತ ದೇಶದ ತಾಲಿಬಾನ್ ಗಳು, ಯಾರು ಸಂವಿಧಾನ ಒಪ್ಪಲ್ಲ ಅವರೆಲ್ಲ ಭಾರತದ ತಾಲಿಬಾನ್ ಗಳು, ಯಾರು ಸ್ವತಂತ್ರ ೨೦೧೪ ರಲ್ಲಿ ಸಿಕ್ತು ರಾಮಮಂದಿರ ಬಳಿಕ ಸಿಕ್ತು ಅನ್ನವವರು ಕೂಡ ತಾಲಿಬಾನ್ ಗಳು ಎಂದು ಹೇಳಿದರು.
ಜಾತಿ ಗಣತಿ ಜಾರಿ ವಿಚಾರವಾಗಿ ಮಾತನಾಡಿ, ಇಲ್ಲಿ ರಾಜಕೀಯ ಒತ್ತೆ ಅಂತ ಏನಿಲ್ಲ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಇದೆ. ರಾಹುಲ್ ಗಾಂಧಿ ಕೂಡ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಆದರಿಂದ ಯಾರು ನಿಲ್ಲಿಸಲ್ಲ ಸಾಧ್ಯವಿಲ್ಲ. ಯಾವ ಕಾರಣಕ್ಕೆ ಮುಂದೂಡಿದ್ದಾರೆ ಅಂತ ಸಿಎಂ ಅಥವಾ ಮಂತ್ರಿಗಳು ಹೇಳಬೇಕು. ನಾನು ಕಾಂಗ್ರೆಸ್ ಕಾರ್ಯಕರ್ತ ಆಗಿ ಹೇಳುತ್ತಿದ್ದೇನೆ. ಇದನ್ನು ಯಾರು ತಡೆಯಲು ಸಾಧ್ಯವಾಗುವುದಿಲ್ಲ. ಇವತ್ತಲ್ಲ ನಾಳೆ ಹೊರಗೆ ಬರಲೇಬೇಕು. ಕಾಂಗ್ರೆಸ್ ಪಕ್ಷದ ಹೇಳಿದಂತೆ ಅನುಷ್ಠಾನ ಮಾಡಲೇಬೇಕು ಎಂದು ತಿಳಿಸಿದ್ದಾರೆ.
ಸರ್ಕಾರ ಇದನ್ನು ಮಾಡಲೇಬೇಕು, ಹಲವು ಮಸೂದೆಗಳನ್ನು ಕೂಡ ವಾಪಸ್ ಪಡೆಯಬೇಕಿದೆ. ಕೇವಲ ಗ್ಯಾರಂಟಿಗಳ ಮಧ್ಯ ಮುಳಗಿದ್ದೇವೆ. ಇವುಗಳನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ಮಾತನಾಡಿ,ಉದಪುರದ ಕಾರ್ಯಕಾರಿಣಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಬೆಳಗಾವಿಯಲ್ಲಿಯೂ ಅದೇ ಚರ್ಚೆ ಆಗಿದೆ. ಉದಯಪುರದ ನಿರ್ಣಯ ಇಟ್ಟುಕೊಂಡು ಕೆಲವರು ಮಾತಾಡ್ತಾರೆ. ಎಲ್ಲವೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗಬೇಕು. ಮೊನ್ನೆ ಸಿಎಲ್ಪಿ ಸಭೆ ಕರೆದಿದ್ದರ. ಗಾಂಧಿ ಕಾರ್ಯಕ್ರಮದ ಬಗ್ಗೆ ಮಾತ್ರ ಚರ್ಚೆ ಮಾಡಿದ್ದಾರೆ. ಉಳಿದ ವಿಚಾರಕ್ಕೆ ಮತ್ತೊಂದು ಸಿಎಲ್ಪಿ ಕರೆಯೋಣ ಎಂದಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಮುಕ್ತವಾಗಿ ಚರ್ಚೆ ಆಗಿದೆ. ಅಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ತೀರ್ಮಾನ ಮಾಡಬೇಕಿತ್ತು, ನೀವು ಪ್ರಶ್ನೆ ಕೇಳಿರುತ್ತಿರಿ, ಅದಕ್ಕೆ ಕೌಂಟರ್ ಪ್ರತಿಕ್ರಿಯೆ ಕೊಟ್ಟಿರುತ್ತಾರೆ ಎಂದು ಎಂಎಲ್ ಸಿ ಬಿ.ಕೆ.ಹರಿಪ್ರಸಾದ್ ಹೇಳಿಕೆ ಕೊಟ್ಟಿದ್ದಾರೆ.