ಎಸ್‌.ಎಂ ಕೃಷ್ಣ ಅವರು ಈ ದೇಶ ಕಂಡ ಒಬ್ಬ ಅದ್ಭುತ ರಾಜಕಾರಣಿ ಹಾಗೂ ಮಂಡ್ಯ ಜಿಲ್ಲೆಯ ಕಣ್ಮಣಿ. ಅವರು ರ‍್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಸಂರ‍್ಭದಲ್ಲಿ ರಾಜ್ಯದಲ್ಲಿ ತೀವ್ರ ಬರಗಾಲವಿತ್ತು. ಅವರು ಆಡಳಿತ ನಡೆಸಿದ ಐದು ರ‍್ಷದಲ್ಲಿ ಒಂದು ರ‍್ಷವೂ ಸರಿಯಾಗಿ ಮಳೆ ಆಗಲಿಲ್ಲ. ಇಡೀ ರಾಜ್ಯ ಒಣಗಿತ್ತು. ಆ ಸಮಯದಲ್ಲಿ ಮಳೆಗಾಗಿ ದೇಶದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಮೋಡ ಬಿತ್ತನೆ ಮಾಡಲಾಗಿತ್ತು. ಇದು ಎಸ್ಎಂ ಕೆ ಅವರಿಗಿದ್ದ ವೈಜ್ಞಾನಿಕ ತಿಳುವಳಿಕೆಗೆ ಒಂದು ಉತ್ತಮ ಉದಾಹರಣೆಯಾಗಿದೆ.  ರಾಜ್ಯದ ದರ‍್ವಿಧಿ ಮೋಡ ಬಿತ್ತಿದರು ಆ ಸಮಯದಲ್ಲಿ ಮಳೆಯಾಗಲಿಲ್ಲ.
ಎಸ್‌ ಎಂ ಕೃಷ್ಣರವರಿಗೆ ಮಳೆಯದೊಂದೆ ಹೊಡೆತ ಅಲ್ಲ. ಅವರ ಕಾಲದಲ್ಲೇ ಕಾಡುಗಳ್ಳ ವೀರಪ್ಪನ್, ವರನಟ ಡಾ|| ರಾಜ್‌ ಕುಮಾರ್‌ ಅವರನ್ನು ಅಪಹರಿಸಿದ.  ಶಾಲಾ ಕಾಲೇಜುಗಳಿಗೆ ತಿಂಗಳುಗಟ್ಟಲೆ ರಜೆ. ರಾಜ್ಯದಲ್ಲೆಲ್ಲಾ  ಸ್ವಯಂ ಘೋಷಿತ ಬಂದ್‌ಗಳು ನಡೆದವು.  ಅಣ್ಣಾವ್ರು ಬಿಡುಗಡೆ ಆಗುವವರೆಗೂ ಹೋರಾಟ ಮಾಡಲು ಕನ್ನಡಿಗರು ಮುಂದಾದರು. ರಾಜ್ಯದ ಸಿಎಂ ಆಗಿ ಎಸ್‌ಎಂಕೆ ಅವರ ಮೇಲೆ ಒಂದೇ ಸಮ ಮಹತ್ತರವಾದ ಜವಾಬ್ದಾರಿಗಳು. ಆದರೆ ಈ ಮಳೆ ವಿಕೋಪ ಮತ್ತು ಅಪಹರಣದ ಒತ್ತಡವನ್ನು ಬಹಳ ಸರ‍್ಥವಾಗಿ ನರ‍್ವಹಿಸಿ, ಐದು ರ‍್ಷಗಳ ಕಾಲ ದಕ್ಷತೆಯಿಂದ ಆಡಳಿತ ನಡೆಸಿದ ಕರ‍್ತಿ ಎಸ್‌.ಎಂ. ಕೃಷ್ಣರವರಿಗೆ ಸಲ್ಲುತ್ತದೆ.

ರಾಜ್ಯದಲ್ಲಿ ಭೀಕರ ಬರವಿದ್ದಾಗ, ಎಸ್‌ ಎಂ ಕೃಷ್ಣರವರು ಕೆರೆ, ಕಟ್ಟೆ ಮತ್ತು ನಾಲೆಗಳ ಅಭಿವೃದ್ಧಿ, ದುರಸ್ತಿ ಕರ‍್ಯಗಳನ್ನು  ಕೈಗೆತ್ತಿಕೊಂಡು, ಉದ್ಯೋಗವಿಲ್ಲದೆ ಹೈರಾಣಾಗಿದ್ದ ಜನರಿಗೆ ಕಾಮಗಾರಿಯ ಉದ್ಯೋಗ ಸಿಗುವಂತೆ ನೋಡಿಕೊಂಡರು. ಕೆರೆ ಕಟ್ಟೆ ಕಾಲುವೆಗಳಲ್ಲಿ ನೀರಿಲ್ಲದ ಕಾರಣದಿಂದಾಗಿ ಅವುಗಳ ದುರಸ್ತಿ ಕೆಲಸಗಳನ್ನು ಮಾಡಲು ಸುಲಭವಾಯಿತು. ಆ ಕಾಮಗಾರಿ ನಡೆಯುತ್ತಿದ್ದ ಕಡೆಗಳಲ್ಲಿ ಅಲ್ಲಿನ ಜನರಿಗೆ ಕಾಮಗಾರಿ ಕೆಲಸವೂ ಸಿಕ್ಕಿತು,   ಅವರ ಕಾಲದಲ್ಲಿ ಎಷ್ಟೋ ರ‍್ಷಗಳಿಂದ ಮುಕ್ತಿ ಕಾಣದೆ ಮುಚ್ಚಿಹೋಗಿದ್ದ ಎಷ್ಟೋ ಕೆರೆ ಕಟ್ಟೆ ಕಾಲುವೆಗಳು ಒಂದು ರ‍್ಷದ ಸಂಪರ‍್ಣ ಮಳೆಯನ್ನು ಕೂಡಿತ್ತುಕೊಳ್ಳುವಂತಾದವು. ಪೋಲಾಗುತ್ತಿದ್ದ ಕಾಲುವೆ ನೀರು ರೈತರ ಉಪಯೋಗಕ್ಕೆ ಬರುವಂತಾಯಿತು. ಬಹುಶಃ ಆ ಸಮಯದಲ್ಲಿ ಕೃಷ್ಣರವರ ಯೋಚನೆಯಿಂದಲೇ ಏನೋ ಮನರೇಗಾ (ರೋಜ್‌ಗಾರ್‌ ಯೋಜನೆ) ಹುಟ್ಟಿಕೊಂಡಿರಬಹುದೇ ಗೊತ್ತಿಲ್ಲ.

ಆ ಬರದ ಕಾಲದಲ್ಲಿ ಎಸ್‌ಎಂ ಕೃಷ್ಣರವರ ಇನ್ನೊಂದು ಮಹತ್ತರ ಯೋಚನೆಯಿಂದ ಬೆಂಗಳೂರಿಗೆ ವಿಶ್ವಮಾನ್ಯತೆ ದೊರಕುವಂತೆ ಮಾಡಿದರು. ಆ ಯೋಜನೆಯೇ `ಐಟಿ ಪರ‍್ಕ್‌' ಮೊದಲೇ ಬೆಂಗಳೂರು ಸಿಟಿಗೆ ʻಗರ‍್ಡನ್‌ ಸಿಟಿʼ ಎನ್ನುವ ಹೆಸರಿತ್ತು. ಅದರ ಜೊತೆಗೆ ʻಸಿಲಿಕಾನ್‌ ಸಿಟಿ ಎಂಬ ಹೆಸರು ಸೇರಿಕೊಂಡಿತು.  ಅದರಿಂದ ಬೆಂಗಳೂರಿನಲ್ಲಿ ನೆಲದ ಬೆಲೆ ಏರಿತು ಅನೇಕ ಉದ್ಯೋಗಗಳು ಸೃಷ್ಠಿಯಾದವು, ನಗರ ಪಟ್ಟಣ, ಗ್ರಾಮ ಜೊತೆಗೆ ರಾಜಧಾನಿ ಎಲ್ಲವೂ ಸೇರಿ ಒಂದಿಡೀ ರಾಜ್ಯ ಒಮ್ಮೆಲೆ ಸಂಕಷ್ಟಕ್ಕೆ ಸಿಲುಕಿಕೊಂಡರೆ ಅದನ್ನು ರ‍್ಥಿಕವಾಗಿ ಮೇಲೆತ್ತುವುದು ಒಂದು ಆಡಳಿತಾತ್ಮಕ ಕಲೆ. ಆ ಕಲೆಯನ್ನು ಕರಗತ ಮಾಡಿಕೊಂಡಿದ್ದವರು ಎಸ್‌

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews