ಕಾರಂಜಾ ಸಂತ್ರಸ್ತರಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಮೂವರು ಯತ್ನಿಸಿರುವ ಘಟನೆ ಬೀದರ್ ನಲ್ಲಿ ನಡೆದಿದೆ. ಕಾರಂಜಾ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಹಾಗೂ ರಾಜಕುಮಾರ , ಲಕ್ಷ್ಮಿಬಾಯಿ, ಸೇರಿದಂತೆ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂದೆ, ಕಾರಂಜಾ ಸಂತ್ರಸ್ತರು ಹೋರಾಟ ನಡೆಸುತ್ತಿದ್ದರು. ಕಾರಂಜಾ ಸಂತ್ರಸ್ತರಿಂದ ಜಿಲ್ಲಾಡಳಿತಕ್ಕೆ 15 ದಿನಗಳ ಕಾಲ ಗಡವು ನೀಡಿದ್ದರು,ಗಡವು ಮುಗಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಟೆಂಟ್ ನಲ್ಲೇ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ್ದಾರೆ. ವಿಷ ಸೇವಿಸಿದ ನಾಲ್ವರನ್ನುಪೊಲೀಸ್ರು ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.