ಎಡಿಜಿಪಿಗೆ ಪಂಚಮಸಾಲಿ ವಕೀಲರ ಬಹಿರಂಗ ಸವಾಲ್ ಹಾಕಿ, ಧರಣಿ ನಡೆಸುತ್ತಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಎಡಿಜಿಪಿ ಹಿತೇಂದ್ರ ವಿರುದ್ಧ ವಕೀಲರ ಪ್ರತಿಭಟನೆಗೆ ಮುಂದಾಗಿದ್ದು, ವಕೀಲರು ಎಡಿಜಿಪಿಗೆ ಅಖಾಡಕ್ಕೆ ಬಾ ಎಂದು ಸವಾಲು ಹಾಕಿದ್ದಾರೆ. ಡಿಸಿ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಹಿತೇಂದ್ರ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಎಡಿಜಿಪಿ ಹಿತೇಂದ್ರ ಅವರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹ ಮಾಡಿದ್ದಾರೆ. ಪೊಲೀಸರ ನಡೆ ಹಾಗೂ ಎಡಿಜಿಪಿ ನಡೆಯ ವಿರುದ್ಧ ಪಂಚಮಸಾಲಿ ವಕೀಲಯರ ಆಕ್ರೋಶ ವ್ಯಕ್ತಪಡಿಸಿರುವುದು ಬೆಳಕಿಗೆ ಬಂದಿದೆ.