ಚೀನಾ ಕಪಿ ಮುಷ್ಟಿಗೆ ಸಿಲುಕುತ್ತಿದೆ ಭಾರತದ ಮತ್ತೊಂದು ನೆರೆ ರಾಷ್ಟ್ರ.
ಚೀನಾ ಕಪಿ ಮುಷ್ಟಿಯೊಳಗೆ ಸಿಲುಕಿಕೊಳ್ಳುತ್ತಿವೆ ಭಾರತದ ಸುತ್ತಮುತ್ತಲಿನ ದೇಶಗಳು.  ಹಿಡಿತ ಬಲಪಡಿಸಿಕೊಳ್ಳುತ್ತಿರುವ ಚೀನಾ, ಮಿತ್ರರನ್ನು ಕಳೆದುಕೊಳ್ಳುತ್ತಿರುವ ಭಾರತ.  ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್‌- ಬಿಆರ್‌ಐ ಬಲೆಗೆ ಬಿದ್ದ ಸೀತೆಯ ನಾಡು

ನೆರೆರಾಷ್ಟ್ರಗಳ ಪೈಕಿ ಹಿಂದೆ ಪಾಕಿಸ್ತಾನವೊಂದೇ ಭಾರತದ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬರುತ್ತಿತ್ತು. ಆದರೀಗ ಬಾಂಗ್ಲಾದೇಶ, ಶ್ರೀಲಂಕಾ, ಮಾಲ್ಡೀವ್ಸ್ ದೇಶಗಳು ನಮ್ಮ  ಸಾಂಪ್ರದಾಯಿಕ ಎದುರಾಳಿಯ ಸಂಗವನ್ನು ಸೇರಿಕೊಳ್ಳುತ್ತಿವೆ.  ಅದು ಸಾಲದೆಂಬಂತೆ ಭಾರತದ  ಜಿಗರಿ ದೋಸ್ತ್‌ನಂತಿದ್ದ ನೆರೆಯ ಹಿಂದೂ ರಾಷ್ಟ್ರ ನೇಪಾಳ ಕೂಡ ಚೀನಾ ಜತೆ ಕೈಜೋಡಿಸಿರುವುದು ಭಾರತವನ್ನು ಚಿಂತೆಗೀಡುಮಾಡಿದೆ. 'ಬಿಆರ್‌ಐ' ಅಭಿವೃದ್ಧಿ ಯೋಜನೆ ಹೆಸರಲ್ಲಿ ಚೀನಾ ಭಾರತದ ಸುತ್ತ ಅದೃಶ್ಯ ಕೋಟೆ ನರ‍್ಮಿಸುವಲ್ಲಿ ನಿರತವಾಗಿರುವುದು ಇದರಿಂದ ಸ್ಪಷ್ಟ. ಡ್ರ‍್ಯಾಗನ್‌ ಬಲೆಯಲ್ಲಿ ಬಿದ್ದಿರುವ ನೇಪಾಳವನ್ನು ರಕ್ಷಿಸಿ ತನ್ನನ್ನು ಕಾಪಾಡಿಕೊಳ್ಳಲು ಭಾರತ ಮತ್ತೊಂದು ರಾಮಾಯಣ ಯುದ್ಧವನ್ನೇ ಮಾಡಬೇಕಾಗಿ ಬಂದೆರು ಆಶ್ರ‍್ಯಪಡಬೇಕಿಲ್ಲ. 


ನೆರೆಯ ಬಾಂಗ್ಲಾದೇಶದಲ್ಲಿ ನೂತನ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮೊಟ್ಟಮೊದಲ ಬಾರಿಗೆ ಚೀನಾದ ಯುದ್ಧನೌಕೆಗಳು ಅಲ್ಲಿಯ ಬಂದರುಗಳಲ್ಲಿ ಲಂಗರು ಹಾಕಿದವು. ಅಲ್ಲೀಗ ಭಾರತ ವಿರೋಧಿ ವಾತಾವರಣ ಭುಗಿಲೆದ್ದಿದೆ. ಪಾಕಿಸ್ತಾನ ಚೀನಾ ಏಜೆಂಟಿನಂತೆ ರ‍್ತಿಸುತ್ತಿರುವುದು ಮೊದಲಿನಿಂದಲೂ ನಡೆದೇ ಇದೆ. ಆದರೆ, ೧೯೭೧ರ ವಿಭಜನೆ ಬಳಿಕ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಹಿಂದೆಂದಿಗಿಂತಲೂ ಪ್ರಸಕ್ತ ಸಂರ‍್ಭದಲ್ಲಿ ಚೀನಾಗೆ ಹೆಚ್ಚು ಹತ್ತಿರವಾಗುತ್ತಿರುವಂತೆ ಗೋಚರಿಸುತ್ತಿದೆ. ಇನ್ನು ಶ್ರೀಲಂಕಾ ತನ್ನ ಹಂಬನ್‌ಟೊಟಾ ಬಂದರನ್ನು ಚೀನಾಗೆ ೯೯ ರ‍್ಷಗಳ ಕಾಲ ಗುತ್ತಿಗೆ ನೀಡಿರುವ ವಿಚಾರ ಹಳೆಯದು. ಚೀನಿ ಗುಪ್ತಚರ ನೌಕೆಗಳನ್ನು ತನ್ನ ಬಂದರಿನೊಳಕ್ಕೆ ಬಿಟ್ಟುಕೊಳ್ಳದಂತೆ ಭಾರತ ಹೇರಿದ ಒತ್ತಡಕ್ಕೆ ಮಣಿದ ಶ್ರೀಲಂಕಾ, ಚೀನಿ ಗೂಢಾಚಾರ ನೌಕೆಗಳಿಗೆ ನರ‍್ಬಂಧ ವಿಧಿಸಿತ್ತು. ಆ ನರ‍್ಬಂಧದ ಅವಧಿ ಇದೇ ರ‍್ಷ ಡಿ.೩೧ರಂದು ಕೊನೆಗೊಳ್ಳುತ್ತಿದೆ. ಮುಂದೆ ಹೇಗೋ ಏನೋ ಗೊತ್ತಿಲ್ಲ. 

ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಈ ಮೂರೂ ರಾಷ್ಟ್ರಗಳು ಚೀನಾ ಹಾಕುವ ತಾಳಕ್ಕೆ ಕುಣಿದಾಗಲೂ ಭಾರತ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಭಾರತ ನಿದ್ದೆಗೆಡಲು ಕಾರಣವಾಗಿದ್ದು ಭಾರತದ ಜಿಗರಿ ದೋಸ್ತ್‌ನಂತಿದ್ದ ಏಕೈಕ ಹಿಂದೂ ನೆರೆರಾಷ್ಟ್ರ ನೇಪಾಳ ಮೇಲಿಂದ ಮೇಲೆ ಯೂರ‍್ನ್‌ ಹೊಡೆಯುತ್ತಿರುವುದು. ನೇಪಾಳವು ಭಾರತದ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಐದು ರಾಜ್ಯಗಳೊಂದಿಗೆ ೧,೮೫೦ ಕಿ.ಮೀ ನಷ್ಟು ಗಡಿ ಹಂಚಿಕೊಂಡಿದೆ. ಹೀಗಾಗಿ, ನೇಪಾಳದೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳುವುದು ಭಾರತಕ್ಕೆ ಮುಖ್ಯ.

ನೇಪಾಳದ ಪ್ರಧಾನಿಯಾಗಿ ಯಾರೇ ಅಧಿಕಾರವಹಿಸಿಕೊಂಡರು ಮೊದಲು ಹೊಸದಿಲ್ಲಿಗೆ ಭೇಟಿ ನೀಡುತ್ತಿದ್ದರು.ಕೆಲ ತಿಂಗಳುಗಳ ಹಿಂದೆ ನೇಪಾಳ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೆ.ಪಿ.ರ‍್ಮ ಓಲಿ ಹೊಸದಿಲ್ಲಿಗೆ ಭೇಟಿ ನೀಡುವ  ಸಂಪ್ರದಾಯವನ್ನು ಮುರಿದು ಚೀನಾಗೆ ಭೇಟಿ ನೀಡಿದಾಗಲೇ ಭಾರತಕ್ಕೆ ಎಲ್ಲವೂ ರ‍್ಥವಾಗಿ ಹೋಗಿತ್ತು. ಓಲಿ ಸರಕಾರ ಬಿಡುಗಡೆಗೊಳಿಸಲು ಮುಂದಾಗಿರುವ ೧೦೦ ನೇಪಾಳಿ ರೂ. ಕರೆನ್ಸಿಯಲ್ಲಿನ ನಕಾಶೆಯಲ್ಲಿ ವಿವಾದಿತ ಪ್ರದೇಶಗಳನ್ನು ಸೇರಿಸಿ ಕಿಚ್ಚು ಹೊತ್ತಿಸಿದೆ. ಲಿಪುಲೆಖ್‌, ಲಿಂಪಿಯಾಧುರ ಮತ್ತು ಕಾಲಾಪಾನಿ, ಈ ಮೂರು ಸ್ಥಳಗಳನ್ನು ತನ್ನದೆಂದು ಪರೋಕ್ಷವಾಗಿ ಹೇಳುವ ಮೂಲಕ ಚೀನಾದ ಚಾಳಿಯನ್ನು ಅನುಕರಿಸಿದೆ. ಸರಕಾರಿ ನಕಾಶೆಯಲ್ಲಿ ವಿವಾದಿತ ಪ್ರದೇಶಗಳನ್ನು ಮುದ್ರಿಸುವ ಮೂಲಕ ಜಗಳಕ್ಕೆ ಕಾಲು ಕೆರೆದುಕೊಂಡು ಬರುವ ತಂತ್ರವನ್ನು ಚೀನಾ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದೆ. ಈಗ ನೇಪಾಳ ಕೂಡಾ ಅದೇ ಹಾದಿ ಹಿಡಿಯುವ ಮೂಲಕ ತಾನು ಯಾರ ಪಕ್ಷ ಎಂಬುದನ್ನು ದೃಢಪಡಿಸಿದೆ. ಹೀಗಿರುವಾಗ ವಿವಾದಿತ ಕರೆನ್ಸಿ ನೋಟನ್ನು ೩೦ ಕೋಟಿ ಸಂಖ್ಯೆಯಲ್ಲಿ ಮುದ್ರಿಸುವ ಹೊಣೆಯೂ ಚೀನಿ ಮುದ್ರಣ ಸಂಸ್ಥೆಯ ಪಾಲಾಗಿರುವುದರಲ್ಲಿ ಅಚ್ಚರಿಯೇನೂ ಇಲ್ಲ.

ಸುಮಾರು ಏಳು ರ‍್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ನೇಪಾಳ- ಚೀನಾ ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್‌ (ಬಿಆರ್‌ಐ) ತಿಳಿವಳಿಕೆ ಪತ್ರಕ್ಕೆ ಓಲಿ ಜೀವ ತುಂಬಿರುವುದು ನೂತನ ಬೆಳವಣಿಗೆ. ಈ ಸಂಬಂಧ ಅವರು ಚೀನಾಗೆ ಭೇಟಿ ನೀಡಿ ಬಿಆರ್‌ಐ ಮರ‍್ಗಸೂಚಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದರೊಂದಿಗೆ ನೇಪಾಳ ಮತ್ತು ಚೀನಾ ದರ‍್ಘಕಾಲಿಕ ಬಾಂಧವ್ಯಕ್ಕೆ ಮುನ್ನುಡಿ ಬರೆದಿದ್ದಾರೆ.

ಭಾರತವು ರಷ್ಯಾ ಮತ್ತು ಪಶ್ಚಿಮ ದೇಶಗಳೊಂದಿಗೆ ಉತ್ತಮ ಸಮತೋಲಿತ ಬಾಂಧವ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ. ಆದರೆ, ಹತ್ತಿರದ ಸ್ನೇಹಿತರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತ, ಸ್ವಾತಂತ್ರ‍್ಯಾನಂತರ ದಕ್ಷಿಣ ಏಷ್ಯಾ ಪ್ರಾಂತ್ಯದ ಮೇಲೆ ಹೊಂದಿದ್ದ ಪ್ರಭಾವ ನಶಿಸುತ್ತಿದೆ. ವ್ಯಾಪಾರ, ಸಂರ‍್ಕ, ರಾಜಕೀಯ, ಸೇನೆ ಮತ್ತು ಸಾಫ್ಟ್‌ ಪವರ್‌ ಬಳಕೆಯಿಂದಾಗಿ ಚೀನಾ ಈ ಪ್ರಾಂತ್ಯದಲ್ಲಿ ತನ್ನ ಹಿಡಿತ ಬಿಗಿಗೊಳಿಸುತ್ತಾ ಸಾಗಿದೆ.

ಚೀನಾದ ಬಿಆರ್‌ಐ ಯೋಜನೆಗೆ ಕೈಜೋಡಿಸಿರುವ ನೇಪಾಳದ ನಡೆ ಹೂವಿನ ಹಾಸಿಗೆಯೇನೂ ಅಲ್ಲ. ಮೂಲಭೂತ ಸೌರ‍್ಯ ಅಭಿವೃದ್ಧಿ, ಇಂಧನ ಭದ್ರತೆಯನ್ನು ಹೊಂದುವ ನಿಟ್ಟಿನಲ್ಲಿ ನೇಪಾಳ ಈ ರಿಸ್ಕನ್ನು ತೆಗೆದುಕೊಂಡಿದೆ. ಮೊದಲೇ ಬಿಆರ್‌ಐ ಯೋಜನೆ ಮೇಲೆ ಹದ್ದಿನ ಕಣ್ಣಿರಿಸಿರುವ ಪಶ್ಚಿಮ ರಾಷ್ಟ್ರಗಳು ಯೋಜನೆಗೆ ಸರ‍್ಪಡೆಗೊಂಡಿರುವ ನೇಪಾಳದ ಅನುಭವದ ಸಾರ ತಿಳಿಯಲು ಉತ್ಸುಕವಾಗಿದೆ.

ಭಾರಾತೀಯ ಸೇನೆಯಲ್ಲಿ ನೇಪಾಳಿ ಸೈನಿಕರು. 

ಭಾರತೀಯ ಸೇನೆಗೂ ನೇಪಾಳಿ ಗರ‍್ಖಾಗಳಿಗೂ ನಡುವಿನ ಸಂಬಂಧ ಶತಮಾನಕ್ಕೂ ಹಳೆಯದು. ಶರ‍್ಯ, ಧರ‍್ಯಕ್ಕೆ ಹೆಸರಾದ ನೇಪಾಳಿ ಗರ‍್ಖಾಗಳು ಬ್ರಿಟಿಷರ ಕಾಲದಿಂದಲೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ರ‍್ಷ ಭಾರತ ತನ್ನ ಗರ‍್ಖಾ ರೆಜಿಮೆಂಟಿಗೆ ಸುಮಾರು ೧೪೦೦ ನೇಪಾಳಿಯರನ್ನು ನೇಮಕಾತಿ ಮಾಡಿಕೊಳ್ಳುತ್ತಿತ್ತು. ಆದರೆ, ಸೇನೆಯ ನೂತನ ನೇಮಕಾತಿ ನಿಯಮಾವಳಿಯಿಂದ ಅದಕ್ಕೆ ತಡೆ ಬಿದ್ದಿದೆ. ಈ ಬಗ್ಗೆ ಅಲ್ಲಿನವರಲ್ಲಿ ಬೇಸರವೂ ಇದೆ. ಹಳೆಯ ಒಪ್ಪಂದದಂತೆ ನೇಮಕಾತಿ ಮಾಡಿಕೊಂಡರೆ ಮಾತ್ರ ಭಾರತೀಯ ಸೇನೆ ಸೇರುತ್ತೇವೆ ಎನ್ನುವುದು ಅಲ್ಲಿನವರ ಬೇಡಿಕೆ.


ಬಿಆರ್‌ಐ ಎನ್ನುವ ಕಬ್ಜಾ ಪ್ಲ್ಯಾನ್‌
ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್‌ ಚೀನಾ ಅಧ್ಯಕ್ಷ  ಶಿ ಜಿನ್‌ಪಿಂಗ್‌ ಅವರ ಕನಸಿನ ಕೂಸು. ಚೀನಾಗೆ ಆಗ್ನೇಯ- ಮಧ್ಯ ಏಷ್ಯಾ, ರಷ್ಯಾ ಮತ್ತು ಯುರೋಪ್‌ ಜೊತೆ ರಸ್ತೆ ಮತ್ತು ಸಮುದ್ರ ಮರ‍್ಗಗಳ ಮೂಲಕ ಸಂರ‍್ಕ ಕಲ್ಪಿಸುವುದು ಈ ಮಹತ್ವಾಕಾಂಕ್ಷಿ ಯೋಜನೆಯ ಉದ್ದೇಶ. ಇದರಿಂದ ವ್ಯಾಪಾರ, ವಾಣಿಜ್ಯ ವ್ಯವಹಾರಗಳಿಗೆ ಸಹಾಯವಾಗಿ ರ‍್ಥಿಕತೆ ಉತ್ತಮಗೊಳ್ಳುತ್ತದೆ ಎನ್ನುವ ಆಮಿಷಗಳಿಗೆ ಮರುಳಾಗಿ ಹಲವು ದೇಶಗಳು ಇದರಲ್ಲಿ ಭಾಗಿಯಾಗಿವೆ. ಆದರೆ, ಬಿಆರ್‌ಐ ಯೋಜನೆ ಮೂಲಕ ಚೀನಾ ಜಗತ್ತನ್ನೇ ಕಬ್ಜಾ ಮಾಡಲು ಹೊರಟಿದೆಯೆನ್ನುವುದು ಪಾಶ್ಚಾತ್ಯ ದೇಶಗಳ ಆತಂಕ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ಚೀನಾದ ಬಿಆರ್‌ಐ ಯೋಜನೆ ವಿರುದ್ಧ ಕೆಂಡಕಾರುತ್ತಲೇ ಚೀನಾದ ಉದ್ದಿಮೆಗಳನ್ನು ಹತ್ತಿಕ್ಕುವ ಪ್ರಕ್ರಿಯೆಯನ್ನು ತೀವ್ರವಾಗಿಸಿದೆ. ಆದರೆ, ಒಂದಂತೂ ಸತ್ಯ, ಬಿಆರ್‌ಐನಿಂದ ಚೀನಾ ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ.

ಡ್ರ‍್ಯಾಗನ್‌ ದೇಶ ಹಾಕಿರುವ ಸಾಲು ಸಾಲು ಸಾಲದ ಕುಣಿಕೆ

ತೀರಿಸಲಾಗದಷ್ಟು ಸಾಲ ನೀಡಿ ನಂತರ ಆ ದೇಶವನ್ನೇ ಕಬ್ಜಾ ಮಾಡಿಕೊಂಡು, ತನ್ನ ತಾಳಕ್ಕೆ ಬೇಕಾದ ಹಾಗೆ ಕುಣಿಸುವ ಚೀನಾದ ತಂತ್ರಗಾರಿಕೆ ಹೊಸದೇನೂ ಅಲ್ಲ. 'ಚೀನಾದ ಸಾಲದ ಕುಣಿಕೆ' ಎಂದೇ ಈ ತಂತ್ರಗಾರಿಕೆ ಕುಖ್ಯಾತಿ ಗಳಿಸಿದೆ. ಪಾಕಿಸ್ತಾನ, ಶ್ರೀಲಂಕಾ, ಜಾಂಬಿಯ, ಕೀನ್ಯಾ, ಲಾವೋಸ್‌, ಮಂಗೋಲಿಯ ಸೇರಿದಂತೆ ಹಲವು ದೇಶಗಳು ಈ ಕುಣಿಕೆಗೆ ಸಿಲುಕಿವೆ.

ಚೀನಾದ ತಾಳಕ್ಕೆ ಕುಣಿಯುತ್ತಿರುವ ರಾಷ್ಟ್ರಗಳ ನಡುವಿನ ಒಂದು ಸಮಾನವಾದ ಅಂಶವೆಂದರೆ ಸಾಲ. ಅವೆಲ್ಲಾ ದೇಶಗಳೂ ಚೀನಾದಿಂದ ಅಪಾರ ಮೊತ್ತದ ಸಾಲವನ್ನು ಪಡೆದಿವೆ. ನೇಪಾಳವೂ ಇದಕ್ಕೆ ಹೊರತಾಗಿಲ್ಲ. ಚೀನಾದಿಂದ ಸಾಲ ಪಡೆದುದರ ಹೊರತಾಗಿಯೂ ನೇಪಾಳ ಇತ್ತೀಚಿನವರೆಗೂ ಡ್ರ‍್ಯಾಗನ್‌ನಿಂದ ಅಂತರ ಕಾಪಾಡಿಕೊಂಡಿತ್ತು. ಆದರೆ, ಕಡೆಗೂ ಚೀನಾದ ಬಿಆರ್‌ಐ ಯೋಜನೆಗೆ ಸಮ್ಮತಿಸುವ ಮೂಲಕ ಚೀನಾದ ಕುಣಿಕೆಗೆ ಸಿಲುಕಿದೆ.


ಭಾರತ ನೇಪಾಳವನ್ನು ಇದುವರೆಗೂ ಕಂಕುಳಲ್ಲೆ ಕಟ್ಟಿಕೊಂಡು ಕಾಪಾಡಿಕೊಂಡಿತ್ತು . ಬಹುಶಃ ನೇಪಾಳ ಭಾರತ ದೇಶ ಮಾಡಿದ ಸಹಾಯವನ್ನು ಮರೆತಂತಿದೆ. ನೆನಬಪು ಮಾಡಿಕೊ  ನೇಪಾಳ ನಿನ್ನ  ದೇಶದಲ್ಲಿ ರಸ್ತೆ ನರ‍್ಮಾಣ, ವೈದ್ಯಕೀಯ ಸೇವೆ, ಶಿಕ್ಷಣ ಕೇಂದ್ರ ಸೇರಿದಂತೆ ಮೂಲಭೂತ ಸೌರ‍್ಯ ಅಭಿವೃದ್ಧಿ ಮತ್ತು ರ‍್ಥಿಕ ನೆರವನ್ನೂ ಒಳಗೊಂಡಂತೆ ಇದುವರೆಗೂ ನೇಪಾಳಕ್ಕೆ ನೀಡಿರುವ ನೆರವನ್ನು ಲೆಕ್ಕವಿಟ್ಟರೆ ಸಾವಿರಾರು ಕೋಟಿ ರೂ.ಗಳನ್ನು ದಾಟುತ್ತದೆ. 

ತ್ರಿಭುವನ್‌ ಏರ್‌ಪರ‍್ಟ್‌ ನರ‍್ಮಾಣ
ಈಸ್ಟ್‌ ವೆಸ್ಟ್‌ ಹೆದ್ದಾರಿ
ನೇಪಾಳ-ಭಾರತ್‌ ಮೈತ್ರಿ ಆರೋಗ್ಯ ಕೇಂದ್ರ
ತ್ರಿಚಾಂದ್‌ ಕಾಲೇಜು ನರ‍್ಮಾಣ
ಬಿ.ಪಿ.ಕೊಯಿರಾಲ ಆರೋಗ್ಯ ವಿಜ್ಞಾನ ಕೇಂದ್ರ
ಜಜರ್‌ಕೋಟ್‌ ಭೂಕಂಪ ನಿಧಿ
ಕೊರೊನಾ ಲಸಿಕೆ ಮತ್ತು ವೈದ್ಯಕೀಯ ಉಪಕರಣಗಳ ನೆರವು
ಬಿಜಲ್‌ಪುರ ರ‍್ದಿಬಸ್‌ ರೈಲ್ವೇ ಲಿಂಕ್‌
ಮೋತಿಹರಿ- ಅಮ್ಲೆಕುಂಜ್‌ ಪೆಟ್ರೋಲಿಯಂ ಪೈಪ್‌ಲೈನ್‌

ಇವೆಲ್ಲಾ ನೇಪಾಳಕ್ಕೆ ಭಾರತ ನೀಡಿದ ಕೊಡುಗೆಗಳೆ.

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews