ಕಾಂಗ್ರೆಸ್ನಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಯಾದಗಿರಿ ಜಿಲ್ಲೆ ಸೈದಾಪುರ ಕ್ರಾಸ್ ಬಳಿ ಮಹರ್ಷಿ ವಾಲ್ಮೀಕಿ ವೃತ್ತ ಅನಾವರಣಕ್ಕೆಂದು ಆಗಮಿಸಿದ್ದ ಅವರು, ತಮ್ಮನ್ನು ಭೇಟಿಯಾದ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನೀವು (ಮಾಧ್ಯಮದವರು) ಈ ಪ್ರಶ್ನೆ ನನಗೆ ಕೇಳಬೇಕಿಲ್ಲ. ಯಾರು ಹೋಗಿದ್ದಾರೋ, ಬಿಟ್ಟಿದಾರೋ ನನಗೆ ಗೊತ್ತಿಲ್ಲ. ಪ್ರಶ್ನೆ ಕೇಳಬೇಕಾಗಿರೋದು ನನಗಲ್ಲ, ಸಿಎಂಗೆ ಕೇಳಿ, ಇದನ್ನ ನೀವು ಸಿಎಂಗೆ ಕೇಳಬೇಕು' ಎಂದು ಹೇಳಿದರು.
ಬೀದರ್ನ ಸಚಿನ್ ಪಂಚಾಳ್ ಆತ್ಮಹತ್ಯೆ ಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕೈವಾಡವಿದೆ ಎಂದು ಆರೋಪಿಸಿ, ಸಚಿವ ಖರ್ಗೆ ರಾಜೀ ನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆಗಿಳಿದಿರುವ ಬಿಜೆಪಿ ವಿರುದ್ದ ಸಚಿವ ಸತೀ ಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ನನಗೆ ನಮ್ಮ ಇಲಾಖೆ ಡೆವಲಪ್ಟೆಂಟ್ ಬಗ್ಗೆ ಕೇಳಿದರೆ ಹೇಳಬಹುದು ಎಂದ ಅವರು, ಬೆಂಗಳೂರಿನಲ್ಲಿ ಸಿಎಂ ಅವರಿಗೆ ಕೇಳೋದಕ್ಕೆ ನಿಮ್ಮವರಿಗೆ ಹೇಳಿ, ಅವರೇ ಉತ್ತರ ಕೊಡುತ್ತಾರೆ ಎಂದರು. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲವೂ ಸರಿಯಿದೆ. ಇನ್ನು, ದೆಹಲಿಯಲ್ಲಿ ಡಿಸಿಎಂ ಡಿಕೆಶಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಅವರು ಪಕ್ಷದ ಅಧ್ಯಕ್ಷರು, ಪತ್ರಿಕಾಗೋಷ್ಠಿ ನಡೆಸಿದರೆ ತಪ್ಪೇನು ಎಂದು ಪ್ರಶ್ನಿಸಿದರು.
ಸಚಿವ ಖರ್ಗೆ ಏಕೆ ರಾಜೀ ನಾಮೆ ನೀಡಬೇಕು? ಅವರ ಮೇಲೆ ಆರೋಪ ಸಾಬೀತಾಗಿದೆಯೇ? ಡೆತ್ ನೋಟಿನಲ್ಲಿ ಅವ ರ ಹೆಸರು ಇದೆಯೇ? ಎಂದು ಪ್ರಶ್ನಿಸಿದರು.