ದೆಹಲಿಯಲ್ಲಿ ಆಡಳಿತಾರೂಢ ಎಎಪಿಯ ಚುನಾವಣಾ ಪೂರ್ವ ಭರವಸೆಗಳಿಗೆ ಸರಿಹೊಂದುವ ಪ್ರಯತ್ನದಲ್ಲಿ, ಬಿಜೆಪಿ ಗರ್ಭಿಣಿಯರಿಗೆ 21,000 ರೂ., ಮಹಿಳಾ ಮತದಾರರಿಗೆ ತಿಂಗಳಿಗೆ 2,500 ರೂ., ಎಲ್ಪಿಜಿ ಸಿಲಿಂಡರ್ಗಳಿಗೆ 500 ರೂಪಾಯಿ ನೀಡುವುದಾಗಿ ಘೋಷಿಸಿದೆ.
ಫೆಬ್ರವರಿ 5ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪಕ್ಷದ ‘ಸಂಕಲ್ಪ ಪತ್ರ’ ಬಿಡುಗಡೆ ಮಾಡಿದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಆಯುಷ್ಮಾನ್ ಭಾರತ್ ಅಡಿಯಲ್ಲಿ 5 ಲಕ್ಷ ರೂ.ಗಳ ಹೆಚ್ಚುವರಿ ರಕ್ಷಣೆಯನ್ನ ಘೋಷಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳಾ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ನೀಡಲಾಗುವುದು ಎಂದರು.
ಇನ್ನು ಬಿಜೆಪಿ ಅಧಿಕಾರಕ್ಕೆ ಬಂದರೆ ಸುಮಾರು 51 ಲಕ್ಷ ಜನರಿಗೆ ಆಯುಷ್ಮಾನ್ ಭಾರತ್ ಯೋಜನೆಯನ್ನು ಅಕ್ಷರಶಃ ಜಾರಿಗೆ ತರಲು ನಿರ್ಧರಿಸಿದೆ. ಈ ಯೋಜನೆಯಡಿ 5 ಲಕ್ಷ ರೂ.ಗಳ ಹೆಚ್ಚುವರಿ ಆರೋಗ್ಯ ವಿಮಾ ರಕ್ಷಣೆ ಸಹ ಅದು ಭರವಸೆ ನೀಡಿದೆ.
ಬಿಜೆಪಿ ಸರ್ಕಾರ ರಚಿಸಿದರೆ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಈ ಯೋಜನೆ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು. ಬಡ ಮಹಿಳೆಯರಿಗೆ ಪ್ರತಿ ಎಲ್ಪಿಜಿ ಸಿಲಿಂಡರ್ಗೆ 500 ರೂ.ಗಳ ಸಬ್ಸಿಡಿ ಮತ್ತು ಹೋಳಿ ಮತ್ತು ದೀಪಾವಳಿಯಂದು ತಲಾ ಒಂದು ಉಚಿತ ಸಿಲಿಂಡರ್ ನೀಡಲಾಗುವುದು ಎಂದು ಹೇಳಿದರು.
60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರ ಪಿಂಚಣಿಯನ್ನು 2,000 ರೂ.ಗಳಿಂದ 2,500 ರೂ.ಗೆ ಹೆಚ್ಚಿಸುವುದಾಗಿ ಕೇಸರಿ ಪಕ್ಷ ಭರವಸೆ ನೀಡಿದೆ. 70 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು, ವಿಧವೆಯರು, ವಿಕಲಚೇತನರು ಮತ್ತು ನಿರ್ಗತಿಕರ ಪಿಂಚಣಿಯನ್ನು 2,500 ರೂ.ಗಳಿಂದ 3,000 ರೂ.ಗೆ ಹೆಚ್ಚಿಸಲಾಗುವುದು.
‘ಮಾತೃತ್ವ ಸುರಕ್ಷಾ ವಂದನಾ ಯೋಜನೆ’ ಅಡಿಯಲ್ಲಿ ಗರ್ಭಿಣಿಯರಿಗೆ 6 ಪೌಷ್ಠಿಕಾಂಶದ ಕಿಟ್ಗಳು ಮತ್ತು ಪ್ರತಿ ಗರ್ಭಿಣಿ ಮಹಿಳೆಗೆ ಸಿಎಂ ನಿಧಿಯಿಂದ 21,000 ರೂಪಾಯಿ ನೀಡಲಾಗುವುದು.ಬಿಜೆಪಿಯ ‘ವಿಕ್ಷಿತ್ ದೆಹಲಿ’ ಗುರಿ ಸಾಧಿಸುವತ್ತ ಪ್ರಣಾಳಿಕೆ ಕೇಂದ್ರೀಕರಿಸಿದೆ ಎಂದು ಹೇಳಿದರು.