ಎಲ್ಲಿ ನೋಡಿದ್ರೂ ಈಗ ಅವಳದ್ದೇ ಶಾಯರಿ... ಅವಳದೇ ಸುದ್ದಿ ಅವಳದೆ ವರದಿ, ಯಾವ ರೀಲ್ಸ್ ತೆಗೆದ್ರೂ ಕಾಣೋದು ಆ ಬೆಕ್ಕಿನ ಕಣ್ಣಿನ ಸುಂದರಿ... ಒಂದು ರೀತಿಯಲ್ಲಿ ಆಕೆ ಚಿಕ್ಕವರಿಂದ ಹಿಡಿದು ದೊಡ್ಡೋರ್‌ವರೆಗೂ ತನ್ನ ಕಣ್ಣ ನೋಟದಿಂದ ಮಾಯಾವಿ ಬಲೆಯನ್ನೇ ಹಾಕಿ ತನ್ನತ್ತ ಸೆಳೆದುಕೊಂಡಿದ್ದಾಳೆ ಅಂದ್ರೂ ತಪ್ಪಾಗಲಾರದು.. ಕೈಯಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿದ್ರೂ ಆಕೆಯದ್ದು ಮಾತ್ರ ಮಾಂತ್ರಿಕ ಅಕ್ಷಿ... ಆ ನಯನ... ಆ ನೋಟ...