ಶಾಸಕರಿಗೆ 10 ಕೋಟಿ ರೂ ನೀಡಲಾಗಿದೆ ಎಂದು ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ಹೇಳಿಕೆ ಕೊಟ್ಟಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಅನುದಾನ ಸ್ವಲ್ಪ ತಡವಾಗಿದೆ. ಬಿಜೆಪಿ ರವರು ಕಾರ್ಯಕ್ರಮ ಘೋಷಣೆ ಮಾಡಿದ್ದು ಬಿಟ್ಟರೆ, ಹಣ ಇಡುತ್ತಿರಲಿಲ್ಲ, ಹಳೇ ಸರ್ಕಾರದ ಸಾಲವನ್ನು ನಾವು ತೀರಿಸಿದ್ದೇವೆ ಎಂದಿದ್ದಾರೆ.
ಸರ್ಕಾರದ ಹಣವನ್ನು ಜನರ ಜೇಬಿಗೆ ಗ್ಯಾರಂಟಿ ಯೋಜನೆಯ ಮೂಲಕ ಹಾಕಲಾಗುತ್ತಿದೆ.ನಮ್ಮ ಸರ್ಕಾರದ ಕೆಲಸ ಅಭಿವೃದ್ದಿ ಮಾಡುವುದಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದಲ್ಲಿನ ಗೊಂದಲ ವಿಚಾರವಾಗಿ ಮಾತನಾಡಿ, ನಮ್ಮ ಹೈ ಕಮಾಂಡ್ ಹೇಳಿದೆ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂದಿದೆ. ಹಾಗಾಗಿ ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡುತ್ತಾರೆ.
ಎಲ್ಲರ ಹಾರೈಕೆಯಿಂದ ಶಿವಣ್ಣ ಆರೋಗ್ಯವಾಗಿದ್ದಾರೆ . ಅವರು ಇನ್ನೂ ಮುಂದಿನ 10 ದಿನಗಳಲ್ಲಿ ಬೆಂಗಳೂರಿಗೆ ಆಗಮಿಸುತ್ತಾರೆ. ಅವರ ತಂದೆ ತಾಯಿ ಹಾಗೂ ಅಭಿಮಾನಿ ದೇವರುಗಳ ಆರ್ಶಿವಾದದಿಂದ ಗುಣಮುಖರಾಗಿದ್ದಾರೆ. ಬಿಜೆಪಿಯವರಿಗೆ ಹಸುವಿನ ವಿಚಾರದಲ್ಲಿ ರಾಜಕೀಯ ಮಾಡುವುದು ಬಿಟ್ಟರೆ ಬೇರೆ ಅವರಿಗೆ ಗೂತ್ತಿಲ್ಲ, ಸಂಸದ ರಾಘವೇಂದ್ರ ಇಷ್ಟು ದಿನ ಸುಮ್ಮನಿದ್ದು ಈಗ ಈಶ್ವರ್ ಖಂಡ್ರೆ ರನ್ನು ಭೇಟಿ ಮಾಡಿದ್ದು ಯಾಕೆ ,ಶರಾವತಿ ಸಂತ್ರಸ್ತ್ರರ ಸಮಸ್ಯೆ ಬೆಳೆಯಲು ಬಿಜೆಪಿಯವರೇ ಕಾರಣ ಎಂದು ಹೇಳಿದರು.
ನಮ್ಮ ಸರ್ಕಾರ ಸಂತ್ರಸ್ತರ ಹಾಗೂ ರೈತರ ಪರವಾಗಿ ಇದೆ ಯಾರು ಭಯಪಡಬೇಡಿ. ಅಮಿತ್ ಷಾ ಬಂದು ಅಡಕೆ ಸಂಶೋಧನಾ ಕೇಂದ್ರ ಮಾಡಲು 500 ಕೋಟಿ ರೂ ಬಿಡುಗಡೆ ಮಾಡುತ್ತೇವೆ ಎಂದಿದ್ದರು. ಘೋಷಣೆ ಮಾಡಿದ ಸಂಶೋಧನಾ ಕೇಂದ್ರ ಎಲ್ಲಿಗೆ ಹೋಯಿತು . ಈ ಕುರಿತು ನಾನು ಇಂದು ಕೃಷಿ ಸಚಿವರ ಜೊತೆ ಮಾತನಾಡುತ್ತೇನೆ. ವಿಐಎಸ್ ಎಲ್ ಮುಚ್ಚುವ ಹುನ್ನಾರವನ್ನು ಹೆಚ್ ಡಿ ಕೆ ಮಾಡಲು ಹೊರಟಿದ್ದಾರೆ.ಅವರು ಸುಮ್ಮನೆ ಆರೋಪ ಮಾಡುವುದನ್ನು ಬಿಡಬೇಕು,ಅವರು ಹಿಂದೆ ಕಾರ್ಖಾನೆಗೆ ಬಂದು ಹೋಗಿದ್ದು ಬಿಟ್ಟರೆ, ರಾಜ್ಯ ಸರ್ಕಾರದ ಜೊತೆ ಯಾವುದೇ ಮಾತುಕತೆ ಮಾಡಿಲ್ಲ.ಸರ್ಕಾರದ ಮೇಲೆ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.