ಬೆಂಗಳೂರು: ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿರುವ ತ್ರಿಪದಿ ಬ್ರಹ್ಮ ಸರ್ವಜ್ಞ ಅವರ ಸಮಾಧಿಯನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ‌ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ವತಿಯಿಂದ ನಯನ‌ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವಜ್ಞ ಅವರ ಸಮಾಧಿಯ ಅಭಿವೃದ್ಧಿಗೆ ಈಗಾಗಲೇ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಐದು ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಇಲಾಖೆ‌ ಅಧಿಕಾರಿಗಳು ಸ್ಥಳಕ್ಕೆ ‌ಖುದ್ದು ಭೇಟಿ ನೀಡಿ ‌ಪರಿಶೀಲನೆ‌ ನಡೆಸಿದ್ದಾರೆ. ಈ ಬಗ್ಗೆ ಹಾವೇರಿ ಜಿಲ್ಲಾಧಿಕಾರಿಯೊಂದಿಗೆ ಇನ್ನಷ್ಟು ಮಾಹಿತಿ ಪಡೆಯಲಾಗುವುದು. ಸಂಬಂಧಪಟ್ಟ ಸಚಿವರೊಂದಿಗೂ ಚರ್ಚೆ ನಡೆಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಸರ್ವಜ್ಞ ಅವರು ಯಾವುದೇ ಜಾತಿ, ಮತ,‌ ಪಂಥಕ್ಕೆ ‌ಸೇರಿದವರಲ್ಲ. ಇಂದು ಎಲ್ಲಾ ಮಹನೀಯರನ್ನು ಒಂದೊಂದು ಸಮುದಾಯಕ್ಕೆ ಸೀಮಿತಗೊಳಿಸಿದ್ದೇವೆ. ಆ ರೀತಿ ಆಗಬಾರದು. ತಮಿಳುನಾಡಿನಲ್ಲಿ ತಿರುವಳ್ಳವರ್, ತೆಲುಗಿನಲ್ಲಿ ವೇಮನರು ಇದ್ದಂತೆ ಕನ್ನಡದಲ್ಲಿ ಸರ್ವಜ್ಞರು ಜಾತಿ ವ್ಯವಸ್ಥೆ, ಅಸಮಾನತೆ ವಿರುದ್ಧ ಬಸವಣ್ಣ ಅವರಂತೆ ಹೋರಾಡಿದ ಮಹಾನೀಯ ಎಂದು ಶ್ಲಾಘಿಸಿದರು.

ಸರ್ವಜ್ಞನಾದಿಯಾಗಿ ಮಹನೀಯರು ಎಲ್ಲರೂ ಕೂಡ ಕಾಲಜ್ಞಾನಿಗಳು. ಮುಂದೆ ಭವಿಷ್ಯ ಏನಾಗುತ್ತದೆ ಎಂದು ಅಂದೆ ಎಲ್ಲರೂ ತಿಳಿಸಿದರು ಇಂದು ನಾವು ಅದರಂತೆ ಹೆಜ್ಜೆ ಇಡುತ್ತಿರುವುದು ಅದಕ್ಕೆ ಸಾಕ್ಷಿಯಾಗಿದೆ. ಸರ್ವಜ್ಞನವರ ಆದರ್ಶಗಳನ್ನ ನಾವು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದು ಜಯಂತಿಗಳ ಅವಶ್ಯಕತೆ ಇದೆ. ಜಯಂತಿಗಳ ಆಚರಣೆ ಮೂಲಕ ನಾವು ಮಹನೀಯರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ತಿಳಿಸಬೇಕಿದೆ. ಇತ್ತೀಚಿಗೆ ನಾನು ಸುದ್ದಿ ವಾಹಿನಿಯನ್ನು ನೋಡುತ್ತಿದ್ದೆ. ಈ ವೇಳೆ ವರದಿಗಾರ ಒಬ್ಬ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ದೆಹಲಿಯ ಮುಖ್ಯಮಂತ್ರಿ ಯಾರೆಂದು ಕೇಳಿದರು. ಯುವಕನಿಗೆ ದೆಹಲಿ ಮುಖ್ಯಮಂತ್ರಿ ಯಾರೆಂದು ಗೊತ್ತಿಲ್ಲದೆ ತಡವರಿಸಿದ್ದ. ಅದನ್ನು ನಾ ಕಂಡು ಬೇಸರವಾಯಿತು. ಮುಖ್ಯಮಂತ್ರಿ ಯಲ್ಲ ನಮ್ಮ ದೇಶ ಹಾಗೂ ರಾಜ್ಯದ ಮಹನೀಯರು ಕೊಟ್ಟ ಕೊಡುಗೆಗಳ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕು. ಜಯಂತಿಗಳಿಂದ ಮಹನೀಯರ ವಿಚಾರಧಾರೆಗಳನ್ನು ತಿಳಿದುಕೊಳ್ಳುವ ಹಾಗೂ ಯುವ ಪೀಳಿಗೆಗಳಿಗೆ ಇದನ್ನ ತಿಳಿಸುವ ಕೆಲಸವಾಗುತ್ತಿರುವುದು ಸಂತಸ ತರಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಇಲಾಖೆ ನಿರ್ದೇಶಕಿ ಡಾ.ಧರಣಿ ದೇವಿ ಮಾಲಗತ್ತಿ, ಜಂಟಿ‌ ನಿರ್ದೇಶಕರಾದ ಬಲವಂತರಾಯ ಪಾಟೀಲ್, ಹಿರಿಯ ವಕೀಲ ಅಮೃತೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews