ಮುಂದಿನ ಮೂರುವರೆ ವರ್ಷ ನಮ್ಮ ಸರ್ಕಾರಕ್ಕೆ ಏನು ಆಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.
ಪ್ರಭಾವಿ ಸಚಿವರ ಸಭೆ ವಿಚಾರಕ್ಕೆ ಖರ್ಗೆ ಪ್ರತಿಕ್ರಿಯೆ ಕೊಟ್ಟಿದ್ದು,ಅವರು ನಮ್ಮ ಮನೆಗೆ, ನಾವು ಅವರ ಮನೆಗೆ ಹೋಗಲೇ ಬಾರದಾ? ಎರಡಮೂರು ದಿನಕ್ಕೊಮ್ಮೆ ನಾನು ಗೃಹ ಸಚಿವರ ಮನೆಯಲ್ಲೇ ಇರ್ತೇನೆ  ನಮ್ಮ ಪಕ್ಷದವರು ಕೂಡ ಹೋಗಬಾರದು ಅಂದ್ರೆ ಹೇಗೆ?ಪರಮೇಶ್ವರ, ಸುರ್ಜೆವಾಲಾ, ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. 
ಕರ್ನಾಟಕದ ಬಗ್ಗೆ ಆಗ್ತಾ ಇರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿ, ನಾವು ಮೂರುವರೆ ವರ್ಷ ಒಳ್ಳೆಯ ಆಡಳಿತ ಕೊಡ್ತೇವೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪುತ್ರ ಪ್ರಿಯಾಂಕ್ ಖರ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ. ಗಂಗಾ ಸ್ನಾನ ಮಾಡಿದ್ರೆ ಪಾಪ ಪರಿಹಾರ ಆಗುತ್ತಾ?ಬಿಜೆಪಿ ಅವರು ಹಿಂದೂ ವಿರೋಧಿ ಅಂತಾರೆ .ನಮ್ಮ ದೇಶದಲ್ಲಿ ಬುದ್ದಿಸಮ್, ಜೈನಿಸಮ್, ಸಿಖ್ ಹಾಗೂ ಲಿಂಗಾಯತ ಧರ್ಮಗಳು ಹುಟ್ಟಿವೆ.ಈ ನಾಲ್ಕು ಧರ್ಮಗಳು ಹುಟ್ಟಿದ್ದು ಹಿಂದೂ ಧರ್ಮದ ವಿರುದ್ಧವಾಗಿ ಯೇ ಎಂದರು.

ಯಾವುದರಲ್ಲಿ ಸಮಾನತೆ, ಸ್ವಾಭಿಮಾನ ಇರಲಿಲ್ಲ ಅದರ ವಿರುದ್ಧ ಹುಟ್ಟಿವೆ.ಬಸವಣ್ಣ ಅವರು ದೇಶ ದ್ರೋಹಿ ನಾ? ಹಿಂದೂ ವಿರೋಧಿನಾ? ಬಿಜೆಪಿ ಅವರಿಗೆ ಕಾಮನ್ ಸೆನ್ಸ್ ಇದೆಯಾ?ಕೇವಲ ಗಂಗಾ ಅಷ್ಟೇ ಅಲ್ಲಾ ದೇಶದ ಯಾವುದೇ ನದಿಯಲ್ಲಿ ಹೋಗಿ ಡುಮಕಿ ಹಾಕಿದ್ರೆ ಪಾಪ ಪರಿಹಾರ ಆಗೋದಿಲ್ಲ.ನಾವು ದುಡಿತಾ ಇರೋದಕ್ಕೆ ಅನುದಾನ ಕೊಡಿ ಸಾಕು.ನಮಗೆ ದೇಶ ದ್ರೋಹಿ ಸರ್ಟಿಫಿಕೇಟ್ ಕೊಡೋಕೆ ಇವರ್ಯಾರು?ಎಕನಾಮಿಕ್ ಸರ್ವೇ ರಿಪೋರ್ಟ್ ಮುಚ್ಚಿ ಹಾಕೋಕೆ ಹೀಗೆಲ್ಲಾ ಮಾಡ್ತಾ ಇದ್ದಾರೆ.ಟ್ರಂಪ್ ಇನ್ವಿಟಷನ್ ಕೊಡಲಿಲ್ಲ ಇಂತಹ ವಿಷಯಗಳ ಮೂಲಕ ಅದನ್ನ ಮುಚ್ಚಿ ಹಾಕೋ ಯತ್ನ ಮಾಡಿದ್ದಾರೆ ಎಂದರು. ಮುಖ್ಯಮಂತ್ರಿಗಳು ಮೂರುವರೆ ಗಂಟೆ ಭಾಷಣ ಮಾಡಿದ್ರು ಇಂಗ್ಲಿಷ್ ನಲ್ಲಿ ಟ್ರಾನ್ಸಲೆಟ್ ಮಾಡಿ.ಯಾವ ಕಡೆ ಕಾನ್ಸನ್ಟ್ರೇಟ್ ಮಾಡಬೇಕು  ಎಂದರು.

ಮಲ್ಲಿಕಾರ್ಜುನ ಖರ್ಗೆ ಪೂಜೆ ಮಾಡಿದ ಫೋಟೋ ವೈರಲ್ ವಿಚಾರವಾಗಿ ಮಾತನಾಡಿ, ಖರ್ಗೆ ಸಾಹೇಬ್ರು ಬುದ್ಧ, ಬಸವ, ಅಂಬೇಡ್ಕರ್ ಮೇಲೆ ನಂಬಿಕೆ ಇಟ್ಟವರು.ಅವರ ಆಚರಣೆ ನನ್ನ ಮೇಲೆ, ನನ್ನ ಆಚರಣೆ ನನ್ನ ಮಕ್ಕಳ ಮೇಲೆ ಆಗೋದಿಲ್ಲ .ನಿಮ್ಮ ಭಕ್ತಿ ನಿಮಗೆ ನಮ್ಮ ಭಕ್ತಿ ನಮಗೆ, ಭಕ್ತಿ ಆಧ್ಯಾತ್ಮಿಕವಾಗಿ ಇರಬೇಕು, ಮನಶಾಂತಿಗಾಗಿ ಇರ್ಬೇಕು ಭಕ್ತಿ ವ್ಯಕ್ತಿಗೆ ಬಂದ್ರೆ ಸರ್ವಧಿಕಾರಿ ಆಗ್ತಾನೆ ಅಂತ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ರು ಇಡಿ ಯಾಕೆ ಮುಡಾ ತನಿಖೆ ಮಾಡ್ತಾ ಇದೆ? ಮನಿ ಲ್ಯಾಡರಿಂಗ್ ನಲ್ಲಿ ಸಿದ್ದರಾಮಯ್ಯ ಪಾತ್ರ ಇದೆ ಅಂತ ಬಿಂಬಿಸಿದ್ದಾರೆ ವಿಜಯೇಂದ್ರ ಸಲ್ಲಿಸಿರೋ ಅಫಿಡೆವಿಟ್ ನಲ್ಲಿ ಮನಿ ಲ್ಯಾಂಡರಿಂಗ್ ಅಂಶವಿದೆ.ಆದರೆ ವಿಜಯೇಂದ್ರ ಅವರ ವಿಚಾರವಾಗಿ ಮಾತನಾಡಿ,  ಇದುವರೆಗೂ ಬಹಿರಂಗಗೊಂಡಿಲ್ಲ  .ಸಿದ್ದರಾಮಯ್ಯ ಅವರದ್ದು ಹೇಗೆ ಆಚೆ ಬರುತ್ತೆ  ಎಂದು ಹೇಳಿದರು. ಇದೆಲ್ಲ ಪೂರ್ವ ನಿಯೋಜಿತ ಅಷ್ಟೇ,ಅಷ್ಟು ಇದ್ದಿದ್ರೆ ಮೇಲೆ ಕೂತ ಇಬ್ಬರು ಬಿಡ್ತಾ ಇದ್ರ  ಎಂದು ಹುಬ್ಬಳ್ಳಿಯಲ್ಲಿ ಪ್ರಿಯಾಂಕ್ ಖರ್ಗೆ ಹೇಳಿಕೆ ಕೊಟ್ಟಿದ್ದಾರೆ.

Ads in Post

Author:

...
Nanje Gowda SS

Administrator

I'm a dedicated news author with a passion for storytelling and a commitment to uncovering the truth. With more than 5 years of experience in journalism, I’ve covered a wide range of topics, from local stories that shape our communities to global events that impact the world at large.

No Reviews