ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳ ನಡುವೆ ಆಂತರಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಇವೆಲ್ಲದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೊಂಚ ರಿಲ್ಯಾಕ್ಸ್ ಮೂಡ್ ಗೆ ತೆರಳಿದ್ದು, ರೈತರೊಂದಿಗೆ ಭತ್ತ ನಾಟಿ ಮಾಡಿ ಎಂಜಾಯ್ ಮಾಡಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಗ್ರಾಮದ ಸುಖೇಂದ್ರ ಹಾಗೂ ಶಿವಬಸಪ್ಪ ಎಂಬುವವರ 2 ಎಕ್ರೆ ಗದ್ದೆಯಲ್ಲಿ ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ . ವಿಜಯೇಂದ್ರ ಅವರು ಗದ್ದೆಗಿಳಿದು ನಾಟಿ ಮಾಡಿದ್ದು, ಬಳಿಕ ರೈತರಿಗೆ ಕಿಟ್ ಗಳನ್ನು ನೀಡಲಾಯಿತು.
ಇತ್ತೀಚೆಗೆ ಊರಲ್ಲಿ ನಾಲ್ಕೈದು ಎಕ್ರೆ ಜಮೀನು ಇದ್ದರೂ ಕೂಡ ಯುವಕರು ಅತಿ ಕಡಿಮೆ ಸಂಬಳಕ್ಕೆ ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಯುವಸಮೂಹದ ಆರ್ಥಿಕ ಪರಿಸ್ಥಿತಿಯೂ ಕಡಿಮೆ ಆಗುತ್ತಿದೆ.
ಈ ನಿಟ್ಟಿನಲ್ಲಿ ಯುವಕರನ್ನು ಕೃಷಿ ಕಡೆ ತರಬೇಕು. ಕೃಷಿಯನ್ನು ಉದ್ಯಮವಾಗಿ ಬೆಳೆಯಬೇಕೆಂಬ ಆಶಯದಿಂದ ಈವೊಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನೂರಾರು ಸಂಖ್ಯೆಯಲ್ಲಿ ಜನ ಆಗಮಿಸಿ ಭತ್ತ ನಾಟಿ ಮಾಡಿದ್ದಾರೆ.