ಪ್ರಯಾಗ್‌ರಾಜ್‌ನಲ್ಲಿ 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಈಗಾಗಲೇ, ಒಂದು ತಿಂಗಳ ಅವಧಿಯಲ್ಲಿ 50 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದರು.
ಲಕ್ನೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಕ್ತರು 'ಏಕ ಭಾರತ ಶ್ರೇಷ್ಠ ಭಾರತ'ದ ಸಂದೇಶವನ್ನು ಸ್ವೀಕರಿಸಿದ್ದಾರೆ ಎಂದು ಪ್ರತಿಪಾದಿಸಿದರು. ಮುಂದುವರಿದು ಮಾತನಾಡಿದ ಅವರು, ಈ ಬಾರಿ ಹೆಚ್ಚಿನ ಸಂಖ್ಯೆಯ ಭಕ್ತರು ರಸ್ತೆ ಮಾರ್ಗವಾಗಿ ಪ್ರಯಾಗ್‌ರಾಜ್‌ಗೆ ಆಗಮಿಸಿದ್ದಾರೆ ಎಂದು ಹೇಳಿದರು.
ಇದರೊಂದಿಗೆ ರೈಲು ಮತ್ತು ವಿಮಾನ ಸಂಚಾರ ವ್ಯವಸ್ಥೆಯೂ ಉತ್ತಮವಾಗಿತ್ತು ಎಂದ ಅವರು, ಉತ್ತಮ ರಸ್ತೆ ಸಾರಿಗೆ ವ್ಯವಸ್ಥೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಶ್ಲಾಘಿಸಿದರು. ಇನ್ನು 110 ಕೋಟಿ ಭಾರತೀಯ ಹಿಂದೂಗಳಲ್ಲಿ 50 ಕೋಟಿ ಜನರು ಮಹಾ ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದಾರೆ ಎಂದರು. ಇದರೊಂದಿಗೆ ಮಹಾಕುಂಭ ಮೇಳ ಅಂತ್ಯವಾಗುವುದರೊಳಗೆ ಇನ್ನು ಹೆಚ್ಚಿನ ಅಂದಾಜು 6 ರಿಂದ 7 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಯೋಗಿ ಆದಿತ್ಯನಾಥ್ ಅವರು, 50-55 ಕೋಟಿ ಭಕ್ತರ ಆಗಮನದಿಂದ ಉತ್ತರ ಪ್ರದೇಶದ ಆರ್ಥಿಕತೆಗೆ 3 ಲಕ್ಷ ಕೋಟಿ ರೂ.ಗಳಷ್ಟು ಆದಾಯ ಬಂದಿದೆ ಎಂದು ಅಂದಾಜಿಸಿದ್ದಾರೆ. ಮಹಾಕುಂಭಕ್ಕೆAದು ನಿಗದಿಪಡಿಸಿದ ಬಜೆಟ್ ಮಹಾಕುಂಭದ ಜೊತೆಗೆ ಪ್ರಯಾಗ್‌ರಾಜ್ ನಗರದ ಸೌಂದರ್ಯೀಕರಣಕ್ಕೂ ಕಾರಣವಾಗಿದೆ ಎಂದೂ ಅವರು ಹೇಳಿದರು. 15 ಸಾವಿರ ಕೋಟಿ ರೂ. ಖರ್ಚು ಮಾಡಿದರೆ, 3 ಲಕ್ಷ ಕೋಟಿ ರೂ. ಲಾಭ ಬಂದಿದೆ ಎಂದು ಅವರು ಹೇಳಿದರು.
ಲಕ್ನೋ ಫ್ಲೈಓವರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಯೋಗಿ ಅವರು, 'ಮೊದಲನೆಯದಾಗಿ, ಅಟಲ್ ಜೀ ಅವರ ಕನಸಿನ ಲಕ್ನೋವನ್ನು ನಿರ್ಮಿಸಿದ್ದಕ್ಕಾಗಿ ರಾಜನಾಥ್ ಸಿಂಗ್ ಜೀ ಅವರನ್ನು ನಾನು ಸ್ವಾಗತಿಸುತ್ತೇನೆ. ಆದರಂತೆ ಇಂದು, 1 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಶಂಕುಸ್ಥಾಪನೆ/ಉದ್ಘಾಟನೆ ನಡೆದಿದೆ. ಇದು ನವ ಭಾರತದ ಹೊಸ ಉತ್ತರ ಪ್ರದೇಶ ರಚನೆಯಾಗುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದರು.
ಆಧ್ಯಾತ್ಮಿಕ ಮೆಗಾ ಕಾರ್ಯಕ್ರಮವಾಗಿರುವುದರ ಜೊತೆಗೆ, ಮಹಾಕುಂಭ 2025 ಭಾರತ ಮತ್ತು ಅದರಾಚೆಗಿನ ಸಾವಿರಾರು ಆಹಾರ ಪ್ರಿಯರಿಗೆ 'ಪಾಕಶಾಲೆಯ ತೀರ್ಥಯಾತ್ರೆ'ಯಾಗಿಯೂ ಹೊರಹೊಮ್ಮುತ್ತಿದೆ, ಜನರು ಮಹಾಕುಂಭದಲ್ಲಿ ಪ್ರಸಾದದ ರೂಪದಲ್ಲಿ ಬಡಿಸಲಾಗುವ ಅತ್ಯುತ್ತಮ 'ಸಾತ್ವಿಕ' ಪಾಕಪದ್ಧತಿಯನ್ನು ಸವಿಯುತ್ತಾರೆ. 40 ಚದರ ಕಿಲೋಮೀಟರ್ ವಿಸ್ತೀರ್ಣದ ಕುಂಭ ಮೇಳದ ಪ್ರದೇಶದಲ್ಲಿ 1,000 ಕ್ಕೂ ಹೆಚ್ಚು 'ಮಹಾ ಭಂಡಾರಗಳು' ಮತ್ತು 500 ಸಾಂಪ್ರದಾಯಿಕ ಮೆಗಾ ಅಡುಗೆಮನೆಗಳು 24್ಠ7 ಕಾರ್ಯನಿರ್ವಹಿಸುತ್ತವೆ.