ಹಾವೇರಿಯ ಕಾಂಗ್ರೆಸ್ ಕಚೇರಿಯಲ್ಲಿ ನೂತನ ಶಾಸಕ ಯಾಸಿರ್ ಖಾನ್ ಪಠಾಣ್ ಹೇಳಿಕೆ. ಶಿಗ್ಗಾವ್ ಸವಣೂರು ಕ್ಷೇತ್ರದಲ್ಲಿ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ೩೦ ರ್ಷದ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಗೆಲುವಿಗೆ ಕಾರಣರಾದ ಕರ್ಯರ್ತರನ್ನ ಅಭಿನಂದಿಸಲು ಸಿಎಂ ನಾಳೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಈಗಾಗಲೇ ನಾನು ಕ್ಷೇತ್ರದಲ್ಲಿ ಹಲವಾರು ಕಡೆ ಭೇಟಿ ನೀಡಿದ್ದೇನೆ. ಬಹಳಷ್ಟು ಕಡೆಗಳಲ್ಲಿ ಸಮಸ್ಯೆ ಎದ್ದು ಕಾಣುತ್ತಿದೆ.. ಅದರ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ವಸತಿ ಶಾಲೆಯನ್ನು ಕೂಡ ಮೂಲಭೂತ ಸೌರ್ಯ ಕೊರತೆ ಇದ. ಜೊತೆಗೆ ತಾಲೂಕ ಮಟ್ಟದಲ್ಲಿ ಆಸ್ಪತ್ರೆಯಲ್ಲೂ ಕೂಡ ಸಮಸ್ಯೆ ಇದೆ. ಇವೆಲ್ಲವುಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆದುಕೊಂಡು ಅವುಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಮುಂದಾಗಿದ್ದೇನೆ. ಇನ್ನು ಕ್ಷೇತ್ರದ ಅನುದಾನ ಬಿಡುಗಡೆ ಬಗ್ಗೆ ಸಿಎಂ ಜೊತೆ ನಾಳೆ ರ್ಚೆ ಮಾಡಲಿದ್ದೇನೆ ಎಂದು ಹೇಳಿದರು.