ಪಂಚಮಸಾಲಿ ಸಮಾಜದ ನಾಯಕರ ಮೇಲೆ ಲಾಠಿ ಪ್ರಹಾರ ವಿಚಾರವಾಗಿ ಬೆಳಗಾವಿಯಲ್ಲಿ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ ಕೊಟ್ಟಿದ್ದಾರೆ. ಮೀಸಲಾತಿ ಬಗ್ಗೆ ಸಮಾಜದ ಡಿಮ್ಯಾಂಡ ಇದೆ, ಇದರ ಬಗ್ಗೆ ಚರ್ಚೆ ಮಾಡೋಣ ಅಂತಾ ಸಿಎಂ ಹೇಳಿದ್ದಾರೆ ಆದರೆ, ಇದು ಒಂದು ಭಾಗ ಎಂದಿದ್ದಾರೆ.ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಮುಖಂಡರು, ಕಾರ್ಯಕರ್ತರು ಬಂದು ಹೋರಾಟ ಮಾಡೋವಾಗ ನಡುವಳಿಕೆ ಹೇಗೆ ಇರಬೇಕು,ಸರ್ಕಾರದ ಮುಖ್ಯಮಂತ್ರಿಗಳ ನಡುವಳಿಕೆ ಹೇಗೆ ಇರಬೇಕು.ಹೋರಾಟದಕ್ಕ ಹತ್ತಿಕ್ಕುವ ಕೆಲಸ ಮುಖ್ಯಮಂತ್ರಿ ಕುಮ್ಮಕ್ಕಿನಿಂದ ಮೊನ್ನೆದಿನ ಆಗಿದೆ ಎಂದು ತಿಳಿಸಿದರು.ಲಾಠಿ ಪ್ರಹಾರ ಮಾಡಿ ನೂರಾರು ಜನಕ್ಕೆ ಹೊಡೆದು ಬೆದರಿಕೆ, ಷಡ್ಯಂತ್ರ ಕುತಂತ್ರ ಮಾಡಿದ್ದು ಅಕ್ಷಮ್ಯ ಅಪರಾಧ,ನಾನು ರಾಜ್ಯದ ಮುಖ್ಯಮಂತ್ರಿಗಳಿಗೆ ಕೇಳಲು ಇಚ್ಛೆಪಡುತ್ತೇನೆ,ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಸಿದ್ದರಾಮಯ್ಯಗೆ ವಿಶ್ವಾಸ ಇದೇಯೋ ಇಲ್ವೊ?ಕೇವಲ ಇದು ಪಂಚಮಸಾಲಿ ಸಮಾಜದ ಪ್ರಶ್ನೆಯಲ್ಲ,ಇದನ್ನ ನಾಡಿನ ಜನತೆ ಪ್ರಶ್ನೆ ಇದೆ.ಸಿಎಂಗೆ ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಇದ್ದಿದ್ದೆ ಆಗಿದ್ದೆ ಅವರ ಮನವಿ ಸ್ವೀಕರಿಬಹುದಿತ್ತು.ಪಂಚಮಸಾಲಿ ಸಮಾಜದ ಅಹವಾಲು ಸ್ವೀಕಾರ ಮಾಡಬೇಕಿತ್ತು.ಸರ್ಕಾರ ಪೊಲೀಸರನ್ನ ದುರುಪಯೋಗ ಮಾಡಿಕೊಂಡು ಲಾಠಿ ಪ್ರಹಾರ ಮಾಡಿದೆಹೀಗಾಗಿ ಸಿಎಂ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಸಿದ್ದು ವಿರುದ್ಧ ಹರಿಹಾಯ್ದಿದ್ದಾರೆ.