ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬಿದ್ದ ಹಿನ್ನಲೆ, ಹೊಸದುರ್ಗ ಕ್ಷೇತ್ರದ ಕೈ ಶಾಸಕ ಬಿ.ಜಿ ಗೋವಿಂದಪ್ಪ ಹೇಳಿಕೆ ಕೊಟ್ಟಿದ್ದಾರೆ. ಸಿಎಂ ಬರುವ ಕಾರ್ಯಕ್ರಮಕ್ಕೆ ಸಚಿವ ಡಿ. ಸುಧಾಕರ್ ಎಲ್ಲರಿಗೂ ತಿಳಿಸಿಲ್ಲ ಎಂಬ ಆರೋಪದ ವಿಚಾರವಾಗಿ ಮಾತನಾಡಿ, ಸಿಎಂ ಡಿಸಿಎಂ ಆಶೀರ್ವಾದದಿಂದ ಜಲಾಶಯಕ್ಕೆ ನೀರು ಹರಿಸಿ ಕೋಡಿ ಬೀಳಿಸುವ ಕೆಲಸ ಸಚಿವರು ಮಾಡಿದ್ದಾರೆ ಎಂದಿದ್ದಾರೆ.
ಸಚಿವ ಡಿ.ಸುಧಾಕರ್ ವಿರುದ್ದ ಶಾಸಕ ಬಿ.ಜಿ ಗೋವಿಂದಪ್ಪ ಗರಂ ಆಗಿದ್ದು,ಸಚಿವ ಡಿ.ಸುಧಾಕರ್ ನಡೆಗೆ ಸ್ವ ಪಕ್ಷದ ಶಾಸಕರಿಂದಲೇ ಅಸಮಧಾನ ವ್ಯಕ್ತವಾಗಿದೆ. ಬಾಗಿನ ಅರ್ಪಿಸಲು ಬರುವ ಸಿಎಂ ಡಿಸಿಎಂ ಸ್ವಾಗತಿಸಲು ಸಚಿವರ ಸಿದ್ದತೆ ಜೋರಾಗಿದ್ದು, ಸಚಿವ ಡಿಸುಧಾಕರ್ ರೈತರ ಸಂಕಷ್ಟ ಹರಿಯಲು ಒಮ್ಮೆಯಾದ್ರೂ ಹೊಸದುರ್ಗಕ್ಕೆ ಬರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಕರ್ತವ್ಯ ಏನೆಂದು ನಾವು ತಿಳಿಸಬೇಕಾಗಿದೆ. ವಾಣಿ ವಿಲಾಸ ಸಾಗರ ತುಂಬಿಸಲು ಹೊಸದುರ್ಗ ತಾಲ್ಲೂಕಿನ ಜನರ ಸಹಕಾರವಿದೆ ಎಂದು ಶಾಸಕ ಗೋವಿಂದಪ್ಪ ತಿಳಿಸಿದ್ದಾರೆ.
ಜಲಾಶಯಕ್ಕೆ 25 ಸಾವಿರ ಎಕರೆ ಜಮೀನು ಬಿಟ್ಟುಕೊಟ್ಟಿದ್ದಾರೆ. ಕೋಡಿ ಬೀಳುವ ಪ್ರದೇಶವೂ ಇರುವುದು ಹೊಸದುರ್ಗ ಕ್ಷೇತ್ರದಲ್ಲಿ.ಸಿಎಂ ಬರುತ್ತಿರುವ ವಿಷವನ್ನ ಜಿಲ್ಲೆಯ ರೈತರಿಗೆ ಸೌಜನ್ಯಕ್ಕೂ ತಿಳಿಸಿಲ್ಲ. ಹೊಸದುರ್ಗ, ಜಿಲ್ಲೆಯ ರೈತರು ರೈತರಲ್ಲ ಎಂಬ ಉದ್ದಟತನ ತೋರುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆ ರೈತರ ಸರ್ವತೋಮುಖ ಅಭಿವೃದ್ದಿ ಬಯಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಹೊಸದುರ್ಗ ಕ್ಷೇತ್ರದ ಜನರ ಕೇಳುವಲ್ಲಿ ವಿಫಲವಾಗಿದೆ.
ಜಲಾಶಯ ತುಂಬಿದ ವಿಚಾರದಲ್ಲಿ ನ್ಯೂನ್ಯತೆ ಇದುವರೆಗೆ ಆಲಿಸಿಲ್ಲ. ಹಿರಿಯೂರು ತಾಲ್ಲೂಕಿನ ರೈತರ ಪರ ಮಾತ್ರ ಜಿಲ್ಲೆಯ ರೈತರ ಪರ ಅಲ್ಲ ಎಂದರು. ಹೊಸದುರ್ಗ ಕ್ಷೇತ್ರದಲ್ಲಿ ರೈತರ ಜಮೀನು ಮುಗಡೆ ಆಗಿ ಸಂಕಷ್ಟವಾಗಿದೆ. ಒಮ್ಮೆಯಾದ್ರು ಬಂದು ಕೃತಜ್ಞತಾ ಪೂರ್ವಕವಾಗಿ ಸ್ಪಂಧಿಸಿದ್ರೆ. ಜಿಲ್ಲಾ ಉಸ್ತುವಾರಿ ಸಚಿವರ ಸ್ಥಾನಕ್ಕೆ ಬೆಲೆ ಗೌರವ ಕೊಡುತ್ತಿದ್ದೆವು. ಜಿಲ್ಲಾ ಉಸ್ತುವಾರಿ ಸಚಿವರಾಗಿ ಯಾವ ಕೆಲಸ ಮಾಡದೆ. ಕೇವಲ ಹಿರಿಯೂರು ಕ್ಷೇತ್ರದ ರೈತರಿಗೆ ಮಾತ್ರ ಸಚಿವರಂತೆ ನಡೆದುಕೊಳ್ಳುತ್ತಿದ್ದಾರೆ. ಒಂದು ಭಾಗದ ರೈತರಿಗೆ ಬೆಣ್ಣೆ, ಇನ್ನೊಂದು ಬಾಗದ ರೈತರಿಗೆ ಸುಣ್ಣ. ಸಚಿವ ಸುಧಾಕರ್ ಅವರ ಮಾರ್ಗ ಬದಲಿಸಿಕೊಳ್ಳಬೇಕು. ಅವರ ನಡೆಯನ್ನ ನಾನು ತಾಲ್ಲೂಕಿನ ರೈತರ ಪರವಾಗಿ ಖಂಡಿಸುವೆ. ಜಲಾಶಯದ ನೀರು ನಿಂತಿರುವ ಗಣಿಯನ್ನ ಗುರುತಿಸಬೇಕು ಎಂದು ತಿಳಿಸಿದ್ದಾರೆ.