ಹತ್ತು ವರ್ಷಗಳಲ್ಲಿ ವಿದೇಶಿ ಹಸ್ತಕ್ಷೇಪವಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನವಿದು ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.
2014 ರಿಂದ, ಇದು ಮೊದಲ ಸಂಸತ್ ಅಧಿವೇಶನವಾಗಿದ್ದು, ನಮ್ಮ ವ್ಯವಹಾರಗಳಲ್ಲಿ ಯಾವುದೇ ವಿದೇಶಿ ಹಸ್ತಕ್ಷೇಪ ಕಂಡುಬಂದಿಲ್ಲ, ಇದರಲ್ಲಿ ಯಾವುದೇ ವಿದೇಶಿ ಶಕ್ತಿಗಳಿಲ್ಲ. ಪ್ರತಿ ಬಜೆಟ್ ಅಧಿವೇಶನಕ್ಕೂ ಮುನ್ನ ನಾನು ಇದನ್ನು ಗಮನಿಸಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.
2014ರಿಂದಲೂ ಯಾವುದಾದರೂ ಒಂದು ವಿಚಾರವನ್ನಿಟ್ಟುಕೊಂಡು ತೊಂದರೆ ಸೃಷ್ಟಿಸಲು ಕೆಲವರು ಸಿದ್ಧರಿರುತ್ತಿದ್ದರು. ಆದರೆ 10 ವರ್ಷಗಳ ಬಳಿಕ ಯಾವುದೇ ವಿದೇಶಿ ಹಸ್ತಕ್ಷೇಪವಿಲ್ಲದೆ ಅಧಿವೇಶನ ನಡೆಯುತ್ತಿದೆ. 2047 ರಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶವಾಸಿಗಳು ಒಟ್ಟಾಗಿ ನಾವು ಈ ನಿರ್ಣಯವನ್ನು ಪ್ರಯತ್ನದಿಂದ ಈಡೇರಿಸುತ್ತೇವೆ. ಮೂರನೇ ಅವಧಿಯಲ್ಲಿ, ನಾವು ದೇಶದ ಸರ್ವತೋಮುಖ ಅಭಿವೃದ್ಧಿಯತ್ತ ಮಿಷನ್ ಮೋಡ್ನಲ್ಲಿ ಮುನ್ನಡೆಯುತ್ತಿದ್ದೇವೆ. ನಾವೀನ್ಯತೆ, ಸೇರ್ಪಡೆ ಮತ್ತು ಹೂಡಿಕೆ – ಇದು ನಮ್ಮ ಆರ್ಥಿಕ ಚಟುವಟಿಕೆಯ ಮಾರ್ಗಸೂಚಿಯ ಆಧಾರವಾಗಿದೆ.ಈ ಹಿಂದೆ ಚಳಿಗಾಲದ ಅಧಿವೇಶನದ ಸಮಯದಲ್ಲಿ ಬಿಲಿಯನೇರ್ ಜಾರ್ಜ್ ಸೊರೊಸ್ ಮತ್ತು ಅವರ ಎನ್ಜಿಒ ದಿ ಓಪನ್ ಸೊಸೈಟಿ ಫೌಂಡೇಷನ್ನೊಂದಿಗಿನ ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಸಂಬಂಧದ ಕುರಿತು ವಿಷಯವನ್ನು ಬಿಜೆಪಿ ಪ್ರಸ್ತಾಪಿಸಿತ್ತು.
ಈ ವಿಷಯವು ಡಿಸೆಂಬರ್ 8 ಹಾಗೂ ನಂತರದ ದಿನಗಳಲ್ಲಿ ಸಂಸತ್ತಿನಲ್ಲಿ ಪ್ರಾಬಲ್ಯ ಸಾಧಿಸಿತ್ತು. ಸೋನಿಯಾ ಗಾಂಧಿ ಅವರು ಜಾರ್ಜ್ ಸೊರೊಸ್ ಅವರ ಪ್ರತಿಷ್ಠಾನದಿಂದ ನಿಧಿಯನ್ನು ಹೊಂದಿರುವ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪಗಳನ್ನು ಕಾಂಗ್ರೆಸ್ ನಿರಾಕರಿಸಿತ್ತು ಎಂದು ತಿಳಿಸಿದ್ದಾರೆ.