ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕೆಂಬ ವಿಚಾರವಾಗಿ,ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ ಹೇಳಿಕೆ ಕೊಟ್ಟಿದ್ದಾರೆ. ನಾವೀಗ ಇಲ್ಲಿ ಬಂದಿದ್ದೇವೆ.ನಮ್ಮ ಪಕ್ಷ ಹಾಗೂ ವಿರೋಧ ಪಕ್ಷದ ಜನಪ್ರತಿನಿಧಿಗಳಿಗೆ ನಾವು ಮನವಿ ಮಾಡುತ್ತೇವೆಉತ್ತರ ಕರ್ನಾಟಕದ ಏನೇ ವಿಚಾರ ಪ್ರಸ್ತಾವ ಮಾಡೋದಿದ್ದರೂ ಮಾಡಿ ಎಂದು ಮನವಿ ಮಾಡುತ್ತೇನೆಂದು ಡಿಕೆಶಿ ಹೇಳಿದ್ದಾರೆ. ಪಂಚಮಸಾಲಿ ಹೋರಾಟದ ವೇಳೆ ಪ್ರತಿಭಟನಾಕಾರರ ಮೇಲೆ ಪೊಲೀಸರ ಲಾಠಿ ಪ್ರಹಾರ ವಿಚಾರವಾಗಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ.ಕಾನೂನು ಚೌಕಟ್ಟಿನಲ್ಲಿ, ನ್ಯಾಯಭದ್ದವಾಗಿ, ಸಂವಿಧಾನ ರಕ್ಷಣೆ ಮಾಡಿಕೊಂಡು, ಆದೇಶಗಳನ್ನು ಮಾಡಿದರೆ ಬಹಳ ಸಂತೋಷವೆಂದು ತಿಳಿಸಿದ್ದಾರೆ.