6 ಜನ ನಕ್ಸಲರ ಶರಣಾಗತಿ ವಿಚಾರವಾಗಿ, ವಿಜಯಪುರದಲ್ಲಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಹೇಳಿಕೆ ಕೊಟ್ಟಿದ್ದಾರೆ. ನಕ್ಸಲರಿಗೆ ಸರ್ಕಾರ ಶರಣಾಗತಿ ಆಗಿದೆಯೋ..ನಕ್ಸಲರು ಶರಣಾಗಿದ್ದರೆ ಕಂಡಿಷನ್ ಹಾಕುತ್ತಿರಲಿಲ್ಲ...ನಕ್ಸಲರು ಬಳಸುವ ಆಯುಧಗಳನ್ನು ಒಪ್ಪಿಸಬೇಕಿತ್ತು. ನನಗಿರುವ ಮಾಹಿತಿ ಪ್ರಕಾರ ಈವರೆಗೂ ಅವರ ಬಳಿಯಿರುವ ಎಕೆ -47,ಎಕೆ-56, ಬಾಂಬ್ ಸೇರಿದಂತೆ ಯಾವುದನ್ನು ಕೊಟ್ಟಿಲ್ಲ ಎಂದಿದ್ದಾರೆ.
ನಕ್ಸಲರು ಕಂಡಿಷನ್ ಹಾಕುತ್ತಿದ್ದಾರೆ..ಶರಣಾಗಿರೋದು ನಕ್ಸಲರೋ,ನಕ್ಸಲರಿಗೆ ಸರ್ಕಾರ ಶರಣಾಗಿದೆಯೋ..ಸಿದ್ದರಾಮಯ್ಯನವರ ಸಾಫ್ಟವೇರ್ ನ ಅರ್ಬನ್ ನಕ್ಸಲರು ಡಿಕ್ಟೇಟ್ ಮಾಡ್ತಾರೆ....ಸಿದ್ದರಾಮಯ್ಯರ ಒಡ್ಡೋಲಗದಲ್ಲಿ ಮಾನಿಟರ್ ಮಾಡುವರು ಅರ್ಬನ್ ನಕ್ಸಲರಿದ್ದಾರೆ ಎಂದು ಹೇಳಿದ್ದಾರೆ. ಗೈಡ್ ಮಾಡುವರು ಅರ್ಬನ್ ನಕ್ಸಲರಿದ್ದಾರೆ.
ನನ್ನದು ಮೂಲಭೂತ ಪ್ರಶ್ನೆ...ನಕ್ಸಲರು ಶರಣಾಗಿದ್ದಾರೋ, ನಕ್ಸಲರಿಗೆ ಇವರು ಶರಣಾಗಿದ್ದಾರೆಯೋ..ನಕ್ಸಲರಿಗೆ ಶರಣಾಗಿಲ್ಲ ಎಂದರೆ ಅವರಿಗೆ ನೆರವು ಕೊಡುತ್ತಿದ್ದವರು ಯಾರು ಅಂತ ಪತ್ತೆ ಹಚ್ಚಬೇಕು..ಆಯುಧಗಳನ್ನು ವಶಕ್ಕೆ ಪಡೆದುಕೊಳ್ಳಬೇಕು...ನೆರವು ಕೊಡ್ತಿದ್ದವರನ್ನು ಬಂಧಿಸಬೇಕು.ಕಾನೂನು ಕ್ರಮ ಆಗಬೇಕು..ಹೀಗಾದರೆ ಮಾತ್ರ ನಕ್ಸಲರು ಶರಣಾಗಿದ್ದಾರೆ ಅಂತ ಭಾವಿಸಬೇಕು..ಇಲ್ಲದೆ ಇದ್ದರೆ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗಿದ್ದಾರೆ ಅಂತ ಭಾವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ವಿಠ್ಠಲಗೌಡ ಹತ್ಯೆ ವಿಚಾರವಾಗಿ ಮಾತನಾಡಿ,ನಕ್ಸಲರ ದಾರಿ ತಪ್ಪು,ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿಯಾಗಿದೆ.ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವವರು ಬ್ಯಾಲೇಟ್ ಮೇಲೆ ನಂಬಿಕೆ ಇಡುತ್ತಾರೆ.ಬುಲೆಟ್ ಮೇಲೆ ಅಲ್ಲ. ನಕ್ಸಲರು ನೆರವು ಪಡೆಯುತ್ತಿರೋದು ರಾಷ್ಟ್ರ ವಿರೋಧಿಗಳಿಂದ.ಚೀನಾ , ಪಾಕಿಸ್ತಾನ ಐಎಸ್ಐನಿಂದ ನೆರವು ಪಡೆಯುತ್ತಾರೆ.ಅವರನ್ನು ದೇಶಭಕ್ತರು ಅಂತ ಸನ್ಮಾನ ಮಾಡೋಕೆ ಆಗುತ್ತಾ!? ಅವರ ವಿಚಾರ ಒಳ್ಳೆಯದು ಅಂತ ಒಪ್ಪಿಕೊಳ್ಳಲು ಆಗುತ್ತಾ..ಸಂವಿಧಾನ ವಿರೋಧಿ, ರಾಷ್ಟ್ರ ಘಾತುಕ ಆಗಿರುವ ನಕ್ಸಲರ ವಿಚಾರಧಾರೆ ತಪ್ಪು ಎಂದು ತಿಳಿಸಿದ್ದಾರೆ.
ವಿಚಾರಧಾರೆಗೆ ನಗರದಲ್ಲಿದ್ದು ಬೆಂಬಲಿಸುವವರು ಅಪರಾಧಿಗಳೇ..ಕಾಡಿನಲ್ಲಿ ಬಂದೂಕು ಹಿಡಿದುಕೊಂಡು ಓಡುವವರು ಮಾತ್ರ ನಕ್ಸಲರಲ್ಲ.ನಗರದಲ್ಲಿದ್ದು ಬೆಂಬಲಿಸುವರು ಅಪರಾಧಿಗಳೇ ಎಂದು ನಕ್ಸಲರ ವಿಚಾರ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಆ ವಿಚಾರಧಾರೆಗೆ ಯಾರಾದರೂ ಸಿಂಪತಿ ಇಟ್ಟುಕೊಂಡಿದ್ರೆ ಸಂವಿಧಾನ ಪರ ಅಂತ ನಾವು ಸರ್ಟಿಫಿಕೇಟ್ ಕೊಡೋಕೆ ಆಗಲ್ಲ ಎಂದು ಹೇಳಿದ್ದಾರೆ.