ಬೆಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸೈಬರ್ ವಂಚನೆ ಮಾಡುತ್ತಿದ್ದಂತ 7 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಆರೋಪಿಗಳಿಂದ 9 ಮೊಬೈಲ್, 11 ಬ್ಯಾಂಕ್ ಪಾಸ್ ಬುಕ್, 6 ಚೆಕ್ ಬುಕ್, 31 ಎಟಿಎಂ ಕಾರ್ಡ್, 9 ಆಧಾರ್ ಕಾರ್ಡ್ ಸೀಜ್ ಮಾಡಿದ್ದಾರೆ.
ಈ ಕುರಿತಂತೆ ಬೆಂಗಳೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ:07/01/2025 ರಂದು ಪಿರಾದುದಾರರಿಗೆ ಓರ್ವ ವ್ಯಕ್ತಿಯು ಪೇಸ್ಬುಕ್ನಲ್ಲಿ ನಕಲಿ ಖಾತೆಯಿಂದ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದು, ಆ ನಕಲಿ ಖಾತೆಯ ಫೇಸ್ಬುಕ್ ಪ್ರೊಫೈಲ್ನಲ್ಲಿ ಪಿರಾದುದಾರರ ಹಳೆಯ ಸ್ನೇಹಿತನ ಫೋಟೋ ಇರುವುದನ್ನು ಪಿರಾದುದಾರರು ಕಂಡು ಅದು ನಿಜವೆಂದು ನಂಬಿ, ಪ್ರೆಂಡ್ಸ್ ರಿಕ್ವೆಸ್ಟ್ ಅನ್ನು ಅಕ್ಸೆಪ್ಟ್ ಮಾಡಿರುತ್ತಾರೆ.
ಪೇಸ್ಬುಕ್ನಲ್ಲಿ ಪ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದ ವ್ಯಕ್ತಿಯು ಪಿರ್ಯಾದುದಾರರಿಗೆ ತಾನು ದುಬೈನಲ್ಲಿ ಇರುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ತಾನು ವಾಪಸ್ ಭಾರತಕ್ಕೆ ಬರುವುದಾಗಿ ತಿಳಿಸಿ ತನ್ನ ಬಳಿ ಇರುವ ಅಪಾರವಾದ ಹಣ ತೆಗೆದುಕೊಂಡು ಭಾರತಕ್ಕೆ ಬಂದರೆ ಹೆಚ್ಚಿನ ತೆರಿಗೆ ನೀಡಬೇಕಾಗಿರುತ್ತದೆ. ಆದ್ದರಿಂದ ತನ್ನ ಬಳಿ ಇರುವ ಹಣವನ್ನು ಪಿರ್ಯಾದುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಿ, ವಾಪಸ್ ಬೆಂಗಳೂರಿಗೆ ಬಂದ ನಂತರ ಪಿರಾದುದಾರರ ಬಳಿಯಿಂದ ವಾಪಸ್ ಪಡೆಯುವುದಾಗಿ ತಿಳಿಸಿರುತ್ತಾನೆ.
ಇದನ್ನು ನಂಬಿದ ಪಿರಾದುದಾರರು, ಬ್ಯಾಂಕ್ ಖಾತೆಯ ನಂಬರ್ನ್ನು ನೀಡಿರುತ್ತಾರೆ. ಆ ನಂತರ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದ ವ್ಯಕ್ತಿಯು ಪಿರಾದುದಾರರ ಬ್ಯಾಂಕ್ ಖಾತೆಗೆ 3 7,85,700/- ಹಣ ವರ್ಗಾವಣೆ ಮಾಡಿರುವಂತಹ ಸಿಟಿ ಬ್ಯಾಂಕ್ನ ನಕಲಿ ರಸೀದಿ ಪೇಸ್ಬುಕ್ ಮುಖಾಂತರ ಪಿರಾದಿಯವರಿಗೆ ಕಳುಹಿಸಿ, ಈ ಹಣವು 24 ಗಂಟೆಗಳಲ್ಲಿ ಪಿರಾದುದಾರರ ಖಾತೆಗೆ ಕ್ರೆಡಿಟ್ ಆಗುವುದಾಗಿಯೂ ಸಹ ತಿಳಿಸಿರುತ್ತಾನೆ. ಆಗ ಇದಕ್ಕೆ ಸಂಬಂಧಪಟ್ಟ ವ್ಯಕ್ತಿ ಕಂಪ್ಲೆಟ್ ನೀಡಿರುತ್ತಾನೆ. ಈ ದೂರಿನ ಅನ್ವಯ ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.